Saturday, 5th October 2024

ಎನ್‌ಐಎ ಕೈಗೆ ಇಸ್ರೇಲ್‌ ಎಂಬೆಸಿ ಸ್ಫೋಟ ಪ್ರಕರಣ

ನವದೆಹಲಿ: ಇಸ್ರೇಲ್‌ ರಾಯಭಾರ ಕಚೇರಿ ಆವರಣದಲ್ಲಿ ಸಂಭವಿಸಿದ ಸ್ಫೋಟದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಳ್ಳಲಿದೆ.

ಜತೆಗೆ ಇಸ್ರೇಲ್‌ ಗುಪ್ತಚರ ಸಂಸ್ಥೆ “ಮೊಸ್ಸಾದ್‌’ ಕೂಡ ದೇಶದ ತನಿಖಾ ಸಂಸ್ಥೆಗಳ ಜತೆಗೆ ಸಹಕಾರ ನೀಡುತ್ತಿದೆ. ಸ್ಫೋಟ ಸಂಭವಿಸಿದ ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸಲು ಬೇಕಾಗಿರುವ ಅಂಶಗಳನ್ನು ದೆಹಲಿ ಪೊಲೀಸರು ತೆರವುಗೊಳಿಸಿದ್ದಾರೆ. ಹೀಗಾಗಿ, ತನಿಖೆಯ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.