ಪಂಜಾಬ್ ಹಾಗೂ ಹರ್ಯಾಣ ಪೊಲೀಸರು ಎನ್‌ಐಎ ಗೆ ಸಾಥ್ ನೀಡಿದ್ದರು. 9 ರಾಜ್ಯಗಳು ಹಾಗೂ ಕೇಂದ್ರಾಡಳಿತದ 324 ಸ್ಥಳಗಳಲ್ಲಿ ಈ ದಾಳಿ ನಡೆದಿದೆ ಪಂಜಾಬ್, ದೆಹಲಿ, ಹರ್ಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್, ಚಂಡೀಗಢ, ಮಧ್ಯ ಪ್ರದೇಶಗಳಲ್ಲಿ ದಾಳಿ ನಡೆದಿದ್ದು 39 ಲಕ್ಷ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರಗಳು ಹಾಗೂ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಎನ್‌ಐಎ 129 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ್ದರೆ, ಪಂಜಾಬ್ ಪೊಲೀಸರು 17 ಜಿಲ್ಲೆಗಳ 143 ಪ್ರದೇಶಗಳಲ್ಲಿ ಹಾಗೂ ಹರ್ಯಾಣ ಪೊಲೀಸರು 10 ಜಿಲ್ಲೆಗಳ 52 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಈ ದಾಳಿಗಳು ಭಯೋತ್ಪಾದಕ ಅರ್ಶ್ ದಲ್ಲಾ ಮತ್ತು ಲಾರೆನ್ಸ್ ಬಿಷ್ಣೋಯ್, ಚೆನು ಪೆಹಲ್ವಾನ್, ದೀಪಕ್ ತೀತಾರ್, ಭೂಪಿ ರಾಣಾ, ವಿಕಾಶ್ ಲಾಗರ್ಪುರಿಯಾ, ಆಶಿಶ್ ಚೌಧರಿ, ಗುರುಪ್ರೀತ್ ಸೆಖೋನ್, ದಿಲ್ಪ್ರೀತ್ ಸಿಮ್ರತ್ ಬಾಬಾ ಮತ್ತು ದಿಲ್ಪ್ರೀತ್ ಸಿಮ್ರತ್ ಬಾಬಾ ಅವರಂತಹ ಭಯಾನಕ ದರೋಡೆಕೋರ-ಭಯೋತ್ಪಾದಕ ಸಂಬಂಧವನ್ನು ಬಹಿರಂಗಗೊಳಿಸುವ ಗುರಿಯನ್ನು ಹೊಂದಿವೆ ಎಂದು ಹೇಳಿದೆ.