Thursday, 12th December 2024

15,000 ಪಾಯಿಂಟ್ ಗಡಿ ದಾಟಿದ ನಿಫ್ಟಿ

ಮುಂಬೈ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ನಿಫ್ಟಿ 15,000 ಪಾಯಿಂಟ್ ಗಡಿ ದಾಟಿತು.

ಸೆನ್ಸೆಕ್ಸ್ ಕೂಡ 51,000 ಪಾಯಿಂಟ್ ಮೀರಿ ನಿಂತಿತು. ಶುಕ್ರವಾರ ಬೆಳಗ್ಗೆ ವಹಿವಾಟಿನಲ್ಲಿ ಎರಡೂ ಸೂಚ್ಯಂಕಗಳು ದಾಖಲೆಯನ್ನು ಮಾಡಿದವು. ಆದರೆ ಬಳಿಕ ಸೆನ್ಸೆಕ್ಸ್ ಮತ್ತು ನಿಫ್ಟಿ ಅದೇ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ.

ಸೆನ್ಸೆಕ್ಸ್ ಸೂಚ್ಯಂಕ ದಿನದ ಗರಿಷ್ಠ ಮಟ್ಟ 51,073.27 ಪಾಯಿಂಟ್ ತಲುಪಿತ್ತು. ನಿಫ್ಟಿ ಸೂಚ್ಯಂಕವು ದಿನದ ಗರಿಷ್ಠ ಮಟ್ಟ 15,014.65 ಪಾಯಿಂಟ್ ಮುಟ್ಟಿದ ನಂತರ, ಕೆಳಗೆ ಇಳಿದು 14,948 ಪಾಯಿಂಟ್ ನಲ್ಲಿ ವ್ಯವಹಾರ ಮಾಡುತ್ತಿತ್ತು.