Saturday, 23rd November 2024

ಷೇರುಪೇಟೆಯಲ್ಲಿ ಗೂಳಿ ಓಟ: 14 ಸಾವಿರ ಗಡಿ ದಾಟಿದ ನಿಫ್ಟಿ

ನವದೆಹಲಿ: ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 300ಕ್ಕೂ ಅಧಿಕ ಪಾಯಿಂಟ್ಸ್‌ಗಳಿಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 14,100ರ ಗಡಿ ದಾಟಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 307.82 ಅಥವಾ ಶೇ. 0.64ರಷ್ಟು ಏರಿಕೆಗೊಂಡು 48,176.80 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 114.40 ಪಾಯಿಂಟ್ಸ್‌ ಅಥವಾ 0.82ರಷ್ಟು ಏರಿಕೆಗೊಂಡು 14,132.90 ಪಾಯಿಂಟ್ಸ್‌ಗೆ ತಲುಪಿದೆ. ಇಂದು 2,061 ಷೇರುಗಳು ಏರಿಕೆ ಕಂಡಿದ್ದು, 973 ಷೇರುಗಳು ಇಳಿಕೆ ಸಾಧಿಸಿದೆ ಮತ್ತು 158 ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಇಂದು ಟಾಟಾ ಸ್ಟೀಲ್, ಹಿಂಡಾಲ್ಕೊ, ಈಚರ್ ಮೋಟಾರ್ಸ್, ಒಎನ್‌ಜಿಸಿ ಮತ್ತು ಟಿಸಿಎಸ್, ಹೆಚ್‌ಸಿಎಲ್ ಟೆಕ್ನಾಲಜೀಸ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಹೀರೋ ಮೊಟೊಕಾರ್ಪ್, ಕೊಟಕ್ ಮಹೀಂದ್ರಾ ಬ್ಯಾಂಕ್, ಬಜಾಜ್ ಫೈನಾನ್ಸ್, ಅದಾನಿ ಪೋರ್ಟ್ಸ್ ಮತ್ತು ಏಷ್ಯನ್ ಪೇಂಟ್ಸ್ ನಷ್ಟ ಅನುಭವಿಸಿವೆ.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಮೌಲ್ಯ ಡಾಲರ್ ಎದುರು 10 ಪೈಸೆ ಹೆಚ್ಚಳ ಗೊಂಡು ಪ್ರತಿ ಡಾಲರ್‌ಗೆ 73.02 ಕ್ಕೆ ತಲುಪಿದೆ. ಇಂದು 72.90-73.03 ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.