Sunday, 15th December 2024

ಎಂಟು ನಗರಗಳಲ್ಲಿ ಡಿ.31 ರವರೆಗೆ ರಾತ್ರಿ ಕರ್ಫ್ಯೂ…

NIght Curfew

ಅಹಮದಾಬಾದ್: ರಾಜ್ಯದಲ್ಲಿ ಒಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ಗುಜರಾತ್ ನ ಎಂಟು ನಗರಗಳಲ್ಲಿ ಡಿ.31 ರವರೆಗೆ ರಾತ್ರಿ ಕರ್ಫ್ಯೂ ಮುಂದುವರೆಸಲಾಗಿ ಗುಜರಾತ್ ಸರಕಾರ ಆದೇಶ ಹೊರಡಿಸಿದೆ.

ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಸಮಯದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುವ ನಿಟ್ಟಿನಲ್ಲಿ ಸರಕಾರ ಡಿ.20 ರಿಂದ ಡಿ.31 ರವರೆಗೆ ನೈಟ್ ಕರ್ಫ್ಯೂ ಮುಂದುವರೆಸಲು ನಿರ್ಧರಿ ಸಿದೆ.

ರಾಜ್ಯದಲ್ಲಿ ಸೋಮವಾರ ಇಬ್ಬರಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದ್ದು ಇದರೊಂದಿಗೆ ರಾಜ್ಯ ದಲ್ಲಿ ಒಟ್ಟು ಎಂಟು ಸೋಂಕಿನ ಪ್ರಕರಣಗಳು ಪತ್ತೆಯಾಗಿದೆ.