Thursday, 12th December 2024

ಐದು ಲಕ್ಷ ರೂ. ಆದಾಯಕ್ಕೆ ಹೊಸ ತೆರಿಗೆ ಇಲ್ಲ: ನಿರ್ಮಲಾ ಸೀತಾರಾಮನ್

ವದೆಹಲಿ: ಐದು ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ಹೊಸ ತೆರಿಗೆ ಇಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.

ನಾನು ಮಧ್ಯಮ ವರ್ಗಕ್ಕೆ ಸೇರಿದವಳಾಗಿದ್ದೇನೆ. ನಾನು ಮಧ್ಯಮವರ್ಗ ದವಳೆಂದು ಗುರುತಿಸಿಕೊಳ್ಳುತ್ತೇನೆ. ಹಾಗಾಗಿ, ಅವರನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಾರ್ಷಿಕವಾಗಿ ಯಾರು ಐದು ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿ ದ್ದಾರೋ ಅವರಿಗೆ ಯಾವುದೇ ರೀತಿಯ ಹೊಸ ತೆರಿಗೆಯನ್ನು ಪ್ರಸಕ್ತ ಸರ್ಕಾರವು ಹೇರಿಲ್ಲ. ಅಲ್ಲದೇ, ಮಧ್ಯಮ ವರ್ಗದವರ ಜೀವನ ಮಟ್ಟವನ್ನು ಹೆಚ್ಚಿಸುವ ಅನೇಕ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಸ್ಮಾರ್ಟ್ ಸಿಟಿಗಳ ನಿರ್ಮಾಣ, ಮೆಟ್ರೋ ಮಾರ್ಗಗಳ ರಚನೆ ಸೇರಿ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.