Sunday, 15th December 2024

ಬಿಹಾರದ ಸಿಎಂ ಆಗಿ ನಿತೀಶ್ ಕುಮಾರ್ ಪುನರಾಯ್ಕೆ

ಪಾಟ್ನಾ: ಎನ್ ಡಿ ಎ ಭರ್ಜರಿ ಗೆಲುವಿನೊಂದಿಗೆ ಬಿಹಾರದಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಆಯ್ಕೆಗೊಂಡಿ ದ್ದಾರೆ. ಈ ಮೂಲಕ ಜೆಡಿಯು ನಾಯಕನಿಗೆ ಸಿಎಂ ಹುದ್ದೆ ಒಲಿದಿದೆ.

ಇಂದು ನಡೆದಂತ ಮುಖ್ಯಮಂತ್ರಿ ಆಯ್ಕೆಯ ಸಭೆಯಲ್ಲಿ, ಎನ್ ಡಿ ಎ ಮುಖ್ಯಸ್ಥರನ್ನಾಗಿ ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ಸತತ 4ನೇ ಬಾರಿ ಸಿಎಂ ಆಗಿ ನಿತೀಶ್ ಕುಮಾರ್ ಆಯ್ಕೆಗೊಂಡಿದ್ದಾರೆ.

ಸೋಮವಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾ‌ರ್‌ ಅಧಿಕಾರ ಸ್ವೀಕರಿಸಲಿದ್ದಾರೆ. ಉಪಮುಖ್ಯಮಂತ್ರಿಯಾಗಿ ಸುಶೀಲ್ ಮೋದಿ ಮುಂದುವರೆಯಲಿದ್ದಾರೆ.

ಈ ಮೂಲಕ ನಿತೀಶ್ ನಾಲ್ಕನೇ ಬಾರಿಗೆ ಸಿಎಂ ಆಗುತ್ತಿದ್ದಾರೆ. ಈ ಬಗ್ಗೆ ಎನ್ ಡಿಎ ಅಧಿಕೃತ ಘೋಷಣೆ ಮಾಡಲಾಗಿದ್ದು, ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.