ಪಾಟ್ನಾ: ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಕ್ಷಾ ಬಂಧನ್ ಆಚರಣೆ ಅಂಗವಾಗಿ ಜೆಡಿಯು ಪಕ್ಷದ ಮುಖ್ಯಸ್ಥ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮರಗಳಿಗೆ ರಾಖಿ ಕಟ್ಟಿದ್ದಾರೆ.
ಬಿಹಾರದಲ್ಲಿ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ 2021ರಿಂದಲೂ ರಕ್ಷಾ ಬಂಧನ್ ಹಬ್ಬವನ್ನು ‘ವೃಕ್ಷ ರಕ್ಷಾ ದಿವಸ್ ‘ ಆಗಿ ಎನ್ ಡಿಎ ನೇತೃತ್ವದ ಬಿಹಾರ ಸರ್ಕಾರ ಆಚರಿಸಿಕೊಂಡು ಬಂದಿದ್ದು, ಜನರು ಸಸಿಗಳನ್ನು ನೆಟ್ಟು, ಅವುಗಳನ್ನು ಕಾಪಾಡುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕೆಂದು ನಿತೀಶ್ ಕುಮಾರ್ ಒತ್ತಾಯಿಸಿ ದ್ದಾರೆ.
ಜನರನ್ನು ಕಾಪಾಡುವಂತೆ ಮರಗಳನ್ನು ರಕ್ಷಿಸಬೇಕಾಗಿದೆ. ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಿಸಬೇಕಾಗಿದೆ. ಜಲ ಜೀವನ್ ಹರಿಯಾಲಿ ಮಿಷನ್ ಅಡಿಯಲ್ಲಿ ರಾಜ್ಯ ಸರ್ಕಾರ ಸಸಿಗಳನ್ನು ನೆಡುವತ್ತಾ ಗಮನ ಕೇಂದ್ರೀಕರಿಸಿದೆ. ಮುಂದಿನ ಪೀಳಿಗೆಯು ಇದೀಗ ಪರಿಸರ ಸಂರಕ್ಷಣೆಯನ್ನು ಅರಿಯಬೇಕಾಗಿದೆ ಎಂದು ಹೇಳಿದರು.