ಸಭೆಯಲ್ಲಿ ಬೆಳೆ ವೈವಿಧ್ಯೀಕರಣ, ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು ಮತ್ತು ಕೃಷಿ ಸಮುದಾಯಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸುವುದನ್ನು ಒಳಗೊಂಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ-ಶಾಲಾ ಶಿಕ್ಷಣದ ಅನುಷ್ಠಾನ, ರಾಷ್ಟ್ರೀಯ ಶಿಕ್ಷಣ ನೀತಿ-ಉನ್ನತ ಶಿಕ್ಷಣದ ಅನುಷ್ಠಾನ ಮತ್ತು ನಗರ ಆಡಳಿತದ ಬಗ್ಗೆ ಚರ್ಚೆ ನಡೆಯಲಿದೆ.
ಭಾರತವು 75ನೇ ವರ್ಷದ ಸ್ವಾತಂತ್ರ್ಯದ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಸಹಕಾರದ ಒಕ್ಕೂಟದ ವ್ಯವಸ್ಥೆಯಾಗಿದ್ದು, ‘ಆತ್ಮ ನಿರ್ಭರ್ ಭಾರತ್’ ಕಡೆಗೆ ಸಾಗುವುದು ಈ ಸಮಯದ ಅಗತ್ಯವಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಈ ಸಭೆಯ ಸಿದ್ಧತೆಗಳ ಭಾಗವಾಗಿ, ಕೇಂದ್ರ ಮತ್ತು ರಾಜ್ಯಗಳ ಆರು ತಿಂಗಳ ಕಠಿಣ ಕಸರತ್ತಿನ ಪರಾಕಾಷ್ಠೆಯಾದ ಮುಖ್ಯ ಕಾರ್ಯ ದರ್ಶಿಗಳ ರಾಷ್ಟ್ರೀಯ ಸಮ್ಮೇಳನವನ್ನು ಜೂನ್ 2022 ರಲ್ಲಿ ಧರ್ಮಶಾಲಾದಲ್ಲಿ ನಡೆಸಲಾಯಿತು. ಸಮ್ಮೇಳನದ ಅಧ್ಯಕ್ಷತೆ ಯನ್ನು ಪ್ರಧಾನ ಮಂತ್ರಿಗಳು ವಹಿಸಿದ್ದರು.
ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮತ್ತು ಭಾರತವು ಮುಂದಿನ ವರ್ಷ G20 ಪ್ರೆಸಿಡೆನ್ಸಿ ಮತ್ತು ಶೃಂಗಸಭೆಯನ್ನು ಆಯೋಜಿಸುತ್ತಿರುವ ಹಿನ್ನೆಲೆಯಲ್ಲಿ ದೇಶವು ಅಮೃತ್ ಕಾಲ್‌ಗೆ ಪ್ರವೇಶಿಸುವುದರಿಂದ ಸಭೆಯು ವಿಶೇಷವಾಗಿ ಮಹತ್ವದ್ದಾಗಿದೆ ಎಂದು ಹೇಳಿಕೆ ತಿಳಿಸಿದೆ.