Sunday, 15th December 2024

ನೀತಿ ಆಯೋಗದ ಉಪಾಧ್ಯಕ್ಷ ಹಠಾತ್ ರಾಜೀನಾಮೆ

ನವದೆಹಲಿ: ನೀತಿ ಆಯೋಗದ ಉಪಾಧ್ಯಕ್ಷ ಹುದ್ದೆಯಿಂದ ರಾಜೀವ್ ಕುಮಾರ್ ಹಠಾತ್ ರಾಜೀನಾಮೆ ನೀಡಿದ್ದಾರೆ.

ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನದಿಂದ ಅರವಿಂದ್‌ ಪನಗಾರಿಯ ಅವರು ನಿರ್ಗಮಿಸಿದ ಬಳಿಕ ಅರ್ಥಶಾಸ್ತ್ರಜ್ಞ ರಾಜೀವ್‌ ಕುಮಾರ್‌ ಅವರು 2017ರ ಆಗಸ್ಟ್‌ನಲ್ಲಿ ಉಪಾ ಧ್ಯಕ್ಷ ಹುದ್ದೆಗೇರಿದ್ದರು. ರಾಜೀವ್‌ ಅವರು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಿಂದ ಡಿಫಿಲ್‌ ಪದವಿ ಮತ್ತು ಲಕ್ನೋ ವಿವಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಸುಮನ್ ಕೆ ಬೆರಿ ಅವರನ್ನು ಕೇಂದ್ರ ಸರ್ಕಾರ ನೂತನ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಮೇ 1 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ರಾಜೀವ್ ಕುಮಾರ್ ಅವರ ಅಧಿಕಾರವಧಿ ಏ.30 ರಂದು ಕೊನೆಗೊಳ್ಳಲಿತ್ತು.