Saturday, 14th December 2024

‘ನಿವಾರ’ ಪರಿಣಾಮ: ಚೆನ್ನೈನಲ್ಲಿ 5 ಮಂದಿ ಸಾವು, ಧರೆಗುರುಳಿದ ಮರಗಳು

ಚೆನ್ನೈ: ‘ನಿವಾರ’ ಚಂಡಮಾರುತದ ಪರಿಣಾಮ ಕಳೆದ ಬುಧವಾರ ರಾತ್ರಿ ಪುದುಚೇರಿ ಮತ್ತು ಕಡಲೂರು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಚೆನ್ನೈನಲ್ಲಿ 5 ಮಂದಿ ಸಾವನ್ನಪ್ಪಿ, 80ಕ್ಕೂ ಹೆಚ್ಚು ಮರಗಳು ಧರುಗುರುಳಿರುವುದಾಗಿ ವರದಿಯಾಗಿದೆ.

ಚಂಡಮಾರುತ, ಕಡಲೂರಿನ ಪೂರ್ವ-ಆಗ್ನೇಯಕ್ಕೆ 50 ಕಿ.ಮೀ ಮತ್ತು ಪುದುಚೇರಿಯ ಪೂರ್ವ ಆಗ್ನೇಯಕ್ಕೆ ಸುಮಾರು 40 ಕಿ.ಮೀ.ದೂರದಲ್ಲಿದೆ.

ತಮಿಳುನಾಡು ಮತ್ತು ಪುದುಚೇರಿಯನ್ನು ಕಾರೈಕಲ್ ಮತ್ತು ಮಾಮಲ್ಲಪುರಂ ನಡುವೆ ಹಾದುಹೋಗಲಿದೆ. ಈ ವೇಳೆಗೆ ಗಂಟೆಗೆ 120-130 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ.