ಮೊದಲಿನ ಕಾಲದಲ್ಲಿ ಲೈಂಗಿಕತೆಯ ಬಗ್ಗೆ ಮಾತನಾಡಲು ಜನ ಹಿಂಜರಿಯುತ್ತಿದ್ದರು. ಆದರೆ ಈಗ ಕಾಲ ಹಾಗಲ್ಲ. ಇಂದಿನ ದಿನಗಳಲ್ಲಿ ಮಹಿಳೆಯರು ಲೈಂಗಿಕ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ಈ ನಡುವೆ ಇತ್ತೀಚೆಗೆ ಯೋನಿ ಬಿಗಿಗೊಳಿಸುವ ಮಾತ್ರೆಗಳು ಹೆಚ್ಚು ಸುದ್ದಿಯಲ್ಲಿವೆ. ಅದರಲ್ಲೂ ವಿಶೇಷವಾಗಿ ಟಿವಿ ನಟಿ ನಿಯಾ ಶರ್ಮಾ(Niya Sharma) ಅವುಗಳನ್ನು ಪ್ರಚಾರ ಮಾಡಲು ವಿಜಿ -3 ಬ್ರಾಂಡ್ನೊಂದಿಗೆ ಕೈಜೋಡಿಸಿದ ನಂತರ ಜನರು ಆಕೆಯ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಶರ್ಮಾ ಅವರ ಈ ಜಾಹಿರಾತು ಟೀಕೆಗಳನ್ನು ಎದುರಿಸಿದ್ದರೂ, ಯೋನಿ ಬಿಗಿಗೊಳಿಸುವ ಮಾತ್ರೆಗಳು ಎಲ್ಲಾ ಮಹಿಳೆಯರು ಬಳಸಬಹುದೇ ಎಂಬ ಪ್ರಶ್ನೆ ಇದೆ. ಅದಕ್ಕೆ ಉತ್ತರ ಇಲ್ಲಿದೆ.
ಯೋನಿ ಬಿಗಿಗೊಳಿಸುವ ಮಾತ್ರೆಯ ಬಗ್ಗೆ ತಜ್ಞರು ಹೇಳಿದ್ದೇನು?
ಯೋನಿ ಸ್ನಾಯುಗಳು ಕಾಲಾಂತರದಲ್ಲಿ ಸಡಿಲಗೊಳ್ಳುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ವಯಸ್ಸಾದ ಮೇಲೆ, ಹೆರಿಗೆಯಾದ ನಂತರ, ಹಾರ್ಮೋನ್ನಲ್ಲಿ ಬದಲಾವಣೆಯಾದಾಗ, ತೂಕ ಬದಲಾವಣೆಯಿಂದ ಮತ್ತು ವ್ಯಾಯಾಮದ ಕೊರತೆಯಿಂದ ಯೋನಿ ಸ್ನಾಯುಗಳು ಸಡಿಲಗೊಳ್ಳುತ್ತವೆ. ಇದರಿಂದ ಮಹಿಳೆಯರಿಗೆ ಮತ್ತು ಪುರುಷರಿಬ್ಬರಿಗೂ ಲೈಂಗಿಕತೆಯಲ್ಲಿ ತೃಪ್ತಿ ಸಿಗುವುದಿಲ್ಲ. ಹಾಗಾಗಿ ಇದನ್ನು ಬಿಗಿಗೊಳಿಸುವುದು ಅತ್ಯಗತ್ಯ ಎಂಬ ಕೆಲವು ವೈದ್ಯ ಪರಿಣತರದು.
ಯೋನಿ ಬಿಗಿಗೊಳಿಸುವ ಮಾತ್ರೆಗಳು ಯೋನಿ ಸಡಿಲತೆಗೆ ತ್ವರಿತ ಪರಿಹಾರವೆಂದು ಸ್ತ್ರೀರೋಗ ತಜ್ಞರು ಹೇಳಿದ್ದಾರೆ. ಈ ಮಾತ್ರೆಗಳು ಸಾಮಾನ್ಯವಾಗಿ ಯೋನಿ ಸ್ನಾಯುಗಳನ್ನು ಬಿಗಿಗೊಳಿಸುವ, ನಯಗೊಳಿಸುವಿಕೆಯನ್ನು ಹೆಚ್ಚಿಸುವ ಅಥವಾ ಲೈಂಗಿಕ ಸಂವೇದನೆಯನ್ನು ಸುಧಾರಿಸುವ ಮಂಜಕನಿ ಮತ್ತು ಡಾಮಿಯಾನಾದಂತಹ ಗಿಡಮೂಲಿಕೆ ಪದಾರ್ಥಗಳನ್ನು ಹೊಂದಿರುತ್ತವೆ. ಕೊಲಾಜನ್ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಅಥವಾ ಅಂಗಾಂಶಗಳನ್ನು ಬಿಗಿಗೊಳಿಸಿ ಯೋನಿಯ ಸ್ನಾಯುಗಳನ್ನು ಪುನಃಸ್ಥಾಪಿಸುವುದಾಗಿ ಕೆಲವು ತಜ್ಞರು ತಿಳಿಸಿದ್ದಾರೆ.
ಅಡ್ಡಪರಿಣಾಮಗಳು ಏನೇನು?
ಆದರೆ ಈ ಉತ್ಪನ್ನಗಳು ಯೋನಿ ಗೋಡೆಗಳಲ್ಲಿ ಸ್ವಲ್ಪ ಊತ ಅಥವಾ ಕಿರಿಕಿರಿಯನ್ನು ಉಂಟುಮಾಡುವ ಮೂಲಕ ತಾತ್ಕಾಲಿಕ ಬಿಗಿಗೊಳಿಸುವ ಪರಿಣಾಮವನ್ನು ಉಂಟುಮಾಡಬಹುದು, ಇದು ಬಿಗಿತದ ಸಂವೇದನೆಗೆ ಕಾರಣವಾಗಬಹುದು. ಹಾಗಾಗಿ ಈ ಮಾತ್ರೆಗಳನ್ನು ಬಳಸುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಸರಾಗವಾಗಿ ಹೇಳಲು ನಿಖರ ವೈಜ್ಞಾನಿಕ ಪುರಾವೆಗಳಿಲ್ಲ. ಇದರ ಅಡ್ಡ ಪರಿಣಾಮವೂ ಇರಬಹುದು ಎಂದಿದ್ದಾರೆ.
ಇದಲ್ಲದೆ, ಅಂತಹ ಮಾತ್ರೆಗಳಲ್ಲಿನ ಗಿಡಮೂಲಿಕೆ ಅಥವಾ ರಾಸಾಯನಿಕ ಸಂಯುಕ್ತಗಳು ಯೋನಿಯ ನೈಸರ್ಗಿಕ ಪಿಎಚ್ ಸಮತೋಲನವನ್ನು ಬದಲಾಯಿಸಬಹುದು. ಸೋಂಕುಗಳು ಅಥವಾ ಕಿರಿಕಿರಿಯ ಅಪಾಯವನ್ನು ಹೆಚ್ಚಿಸಬಹುದು. ಅಲರ್ಜಿಯ ಪ್ರತಿಕ್ರಿಯೆಗಳು ಅಥವಾ ಇತರ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಹಾಗೆಯೇ ಅವು ಯೋನಿಯಲ್ಲಿರುವ ಸೂಕ್ಷ್ಮಜೀವಿಯನ್ನು ನಾಶಪಡಿಸಬಹುದು. ಇದು ಯೋನಿ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು ಎಂದು ಕೆಲವು ವೈದ್ಯ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಪತಿ-ಪತ್ನಿ ನಡುವೆ ವಿರಸ ಮೂಡಲು ಇದೇ ಕಾರಣ!
ಹಾಗಾಗಿ ಈ ಯೋನಿ ಬಿಗಿಗೊಳಿಸುವ ಮಾತ್ರೆಗಳು ಸುರಕ್ಷಿತ ಎಂಬುದು ಸಾಬೀತಾಗಿಲ್ಲ. ಆದಕಾರಣ ಇವುಗಳನ್ನು ಬಳಸಿ ಅಡ್ಡಪರಿಣಾಮಗಳನ್ನು ಎದುರಿಸುವ ಬದಲು ಯೋನಿ ಬಿಗಿಗೊಳ್ಳಲು ನೈಸರ್ಗಿಕ ವಿಧಾನಗಳನ್ನು ಅನುಸರಿಸಿ. ಅದಕ್ಕಾಗಿ ನೀವು ಸೂಕ್ತ ವ್ಯಾಯಾಮವನ್ನು ಅಭ್ಯಾಸ ಮಾಡಬಹುದು. ಇದು ಯೋನಿ ಸ್ನಾಯುಗಳನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ಯೋನಿ ಬಿಗಿತ ಸುಧಾರಿಸುತ್ತದೆ ಮತ್ತು ಲೈಂಗಿಕ ತೃಪ್ತಿಯನ್ನು ಹೆಚ್ಚಿಸುತ್ತವೆ.