Friday, 22nd November 2024

Durga Puja : ಸಾರ್ವಜನಿಕವಾಗಿ ದುರ್ಗಾ ಪೂಜೆ ಮಾಡಬಾರದು; ಬಾಂಗ್ಲಾದಲ್ಲಿ ಮತಾಂಧ ಮುಸ್ಲಿಮರ ತಾಕೀತು

Durga Puja

ಬೆಂಗಳೂರು: ಹಿಂದೂಗಳ ಅತ್ಯಂತ ಸಂಭ್ರಮದ ಹಬ್ಬವಾದ ನವರಾತ್ರಿಯಲ್ಲಿ ದುರ್ಗಾ ಪೂಜೆ (Durga Puja) ಮಾಡುವಂತಿಲ್ಲ ಎಂದು ಬಾಂಗ್ಲಾದೇಶದ ಮತಾಂಧ ಮುಸ್ಲಿಮರು ತಾಕೀತು ಮಾಡುತ್ತಿದ್ದಾರೆ. ಇದು ಅಲ್ಲಿನ ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಆತಂಕದ ವಿಷಯವಾಗಿದೆ. ತೀವ್ರಗಾಮಿ ಇಸ್ಲಾಮಿಕ್ ಗುಂಪುಗಳು ಹಬ್ಬದ ಮುಕ್ತ ಆಚರಣೆಯನ್ನು ವಿರೋಧಿಸುತ್ತಿವೆ ಮತ್ತು ಹಬ್ಬದ ಸಮಯದಲ್ಲಿ ರಾಷ್ಟ್ರವ್ಯಾಪಿ ರಜಾದಿನಗಳನ್ನು ನೀಡಬಾರದು ಎಂದು ಒತ್ತಾಯಿಸುತ್ತಿದೆ.

ಢಾಕಾದ ಸೆಕ್ಟರ್ 13 ರಲ್ಲಿ ಉಗ್ರಗಾಮಿ ಗುಂಪುಗಳು ಮೆರವಣಿಗೆ ನಡೆಸಿದ್ದು ಹಿಂದೂಗಳು ದುರ್ಗಾಪೂಜೆಗಾಗಿ ಆಟದ ಮೈದಾನವನ್ನು ಬಳಸುವುದನ್ನು ವಿರೋಧಿದ್ದಾರೆ. ಅವರು ಈ ಸ್ಥಳದಲ್ಲಿ ವರ್ಷಗಳಿಂದ ದುರ್ಗಾ ಪೂಜೆ ಆಚರಿಸುತ್ತಿದ್ದಾರೆ.

ಇನ್ಸಾಫ್ ಕೀಮ್ಕರಿ ಛತ್ರ-ಜನತಾ ಎಂಬ ಸಂಘಟನೆಯು ಬಾಂಗ್ಲಾ ಭಾಷೆಯಲ್ಲಿ ಬರೆದ ಪೋಸ್ಟರ್ ಹಿಡಿದುಕೊಂಡು ಮೆರವಣಿಗೆ ನಡೆಸಿದ್ದಾರೆ. ರಸ್ತೆಗಳನ್ನು ಮುಚ್ಚಿ ದುರ್ಗಾ ಪೆಂಡಾಲ್ ಹಾಗಕಿ ಎಲ್ಲಿಯೂ ಪೂಜೆ ಮಾಡುವುದಿಲ್ಲ. ವಿಗ್ರಹ ವಿಸರ್ಜನೆಯಿಂದ ನೀರಿಗೆ ಮಾಲಿನ್ಯ ಮಾಡಬಾರದು. ವಿಗ್ರಹಗಳಿಗೆ ಪೂಜೆ ಇಲ್ಲ” ಎಂದು ಬರೆದಿದ್ದಾರೆ.

ಈ ಗುಂಪು 16 ಅಂಶಗಳ ಬೇಡಿಕೆಯನ್ನು ಮಂದಿಟ್ಟಿದೆ. ದುರ್ಗಾಪೂಜೆ ಪರಿಸರ ಹಾನಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪೂಜೆಯ ಸಾರ್ವಜನಿಕ ಪ್ರದರ್ಶನಗಳು ಮತ್ತು ವಿಗ್ರಹ ವಿಸರ್ಜನೆಗಳ ಮೇಲೆ ನಿರ್ಬಂಧನೆ ಹಾಕಬೇಕು ಎಂದು ಹೇಳಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳಿಗಾಗಿ ರಸ್ತೆ ಮುಚ್ಚುವುದನ್ನು ನಿಷೇಧಿಸುವುದು ಮತ್ತು ಹಬ್ಬದ ವೆಚ್ಚಗಳಿಗಾಗಿ ಸರ್ಕಾರದ ಪರಿಹಾರ ನಿಧಿ ಬಳಸಬಾರದು ಎಂದು ಹೇಳಿದೆ.

ಹಿಂದೂಗಳು ಜನಸಂಖ್ಯೆಯ ಶೇಕಡಾ 2ಕ್ಕಿಂತ ಕಡಿಮೆ ಇರುವುದರಿಂದ, ದುರ್ಗಾ ಪೂಜೆಗೆ ಸಾರ್ವಜನಿಕ ರಜಾದಿನಗಳನ್ನು ನೀಡಬಾರದರು. ಏಕೆಂದರೆ ಇದು ಮುಸ್ಲಿಂ ಬಹುಸಂಖ್ಯಾತರ ಜೀವನಕ್ಕೆ ಅಡ್ಡಿಪಡಿಸುತ್ತದೆ ಮತಾಂಧ ಮುಸ್ಲಿಮರು ವಾದ ಮಾಡಿದ್ದಾರೆ. ಹಿಂದೂಗಳ ಹಬ್ಬಗಳನ್ನು ಯಾವುದೇ ಮುಸ್ಲಿಮರು ಬೆಂಬಲಿಸಬಾರದು ಹಾಗೂ ಹಬ್ಬದಲ್ಲಿ ಪಾಲ್ಗೊಳ್ಳಬಾರದು ಎಂದು ಅವರು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: Bilkis Bano Case : ಬಿಲ್ಕಿಸ್ ಬಾನೊ ಕೇಸ್‌ನಲ್ಲಿ ಗುಜರಾತ್‌ ಸರ್ಕಾರಕ್ಕೆ ಸುಪ್ರೀಂ ಕೋರ್ಟಲ್ಲಿ ಮತ್ತೆ ಹಿನ್ನಡೆ

ಬಾಂಗ್ಲಾದೇಶದಲ್ಲಿ ದೇವಾಲಯಗಳನ್ನು ತೆಗೆದುಹಾಕುವುದು ಅವರ ಬೇಡಿಕೆಯಲ್ಲಿ ಸೇರಿದೆ. ಭಾರತವು ಬಾಂಗ್ಲಾದೇಶದ ರಾಷ್ಟ್ರೀಯ ಶತ್ರುವಾಗಿರುವುದರಿಂದ, ಬಾಂಗ್ಲಾದೇಶದ ಹಿಂದೂ ನಾಗರಿಕರು ಭಾರತವನ್ನು ವಿರೋಧಿ ಎಂದು ಒಪ್ಪಬೇಕು. ಈ ಕಾರಣಕ್ಕಾಗಿ ಭಾರತ ವಿರೋಧಿ ಬ್ಯಾನರ್‌ಗಳು ಮತ್ತು ಭಾರತ ವಿರೋಧಿ ಘೋಷಣೆಗಳನ್ನು ದೇವಾಲಯಗಳಲ್ಲಿ ಇಡಬೇಕು ಎಂದು ಮತ್ತೊಂದು ಬೇಡಿಕೆಯಲ್ಲಿ ತಿಳಿಸಲಾಗಿದೆ.

ಈ ಬೆಳವಣಿಗೆಗಳು ತೀವ್ರ ಒತ್ತಡದಲ್ಲಿ ದುರ್ಗಾ ಪೂಜೆ ಆಚರಿಸಲು ತಯಾರಿ ನಡೆಸುತ್ತಿರುವ ಹಿಂದೂ ಸಮುದಾಯದಲ್ಲಿ ಆತಂಕವನ್ನು ಹೆಚ್ಚಿಸಿದೆ. ಹಿಂದಿನ ಶೇಖ್ ಹಸೀನಾ ನೇತೃತ್ವದ ಸರ್ಕಾರದ ಪತನದ ನಂತರ ಈ ಸಮುದಾಯವು ಹೆಚ್ಚಿನ ದಾಳಿಗಳನ್ನು ಎದುರಿಸಿದೆ. ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ನೇತೃತ್ವದ ಆಡಳಿತದಿಂದ ಹಿಂದೂಗಳಿಗೆ ಭದ್ರತೆಯ ಭರವಸೆಗಳ ಹೊರತಾಗಿಯೂ, ಪರಿಸ್ಥಿತಿ ಉದ್ವಿಗ್ನವಾಗಿದೆ.