Thursday, 12th December 2024

ಮಹಾರಾಷ್ಟ್ರದಲ್ಲಿ ಕಲ್ಲಿದ್ದಲು ಕೊರತೆಯಿಂದ 13 ಶಾಖೋತ್ಪನ್ನ ಘಟಕ ಸ್ಥಗಿತ !

ಮುಂಬೈ: ರಾಜ್ಯದ 13 ಶಾಖೋತ್ಪನ್ನ ಘಟಕಗಳು ಕಲ್ಲಿದ್ದಲು ಕೊರತೆಯಿಂದ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಹಿತಮಿತವಾಗಿ ಬಳಸಿ ಎಂದು ಮಹಾರಾಷ್ಟ್ರ ಸರಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಮಹಾರಾಷ್ಟ್ರ ಎಲೆಕ್ಟ್ರಿಸಿಟಿ ರೆಗ್ಯೂಲೇಟರಿ ಕಮಿಷನ್ ಜನರು ಗರಿಷ್ಠ ಬಳಕೆಯ ಅವಧಿಯಲ್ಲಿ ಜನರು ಕಡಿಮೆ ವಿದ್ಯುತ್ ಬಳಸಿ ಉಳಿಸಬೇಕು. ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಎದುರಾಗಿದ್ದು, 13 ಘಟಕ ಗಳು ಸ್ಥಗಿತಗೊಂಡಿವೆ ಎಂದು ಹೇಳಿದೆ.

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಆಗದಂತೆ ಸರಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಆದರೂ ಬೆಳಿಗ್ಗೆ 6ರಿಂದ 10 ಮತ್ತು ಸಂಜೆ 6ರಿಂದ 10 ಗಂಟೆಯವರೆಗೆ ಕಡಿಮೆ ವಿದ್ಯುತ್ ಬಳಸಿ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ.