ನಾಗಪುರ: ಫಾಸ್ಟ್ಯಾಗ್ ಅನುಷ್ಠಾನಕ್ಕೆ ವಿಧಿಸಿರುವ ಗಡುವನ್ನು ಮತ್ತಷ್ಟು ವಿಸ್ತರಿಸಲಾಗುವುದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾನುವಾರ ಹೇಳಿದ್ದಾರೆ.
ವಾಹನ ಮಾಲೀಕರು ಕೂಡಲೇ ಇ – ಪಾವತಿ ಸೌಲಭ್ಯ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಎಲೆಕ್ಟ್ರಾನಿಕ್ ಶುಲ್ಕ ಪಾವತಿಸಲು ಅನುಕೂಲವಾಗುವ ಫಾಸ್ಟ್ಯಾಗ್ ಅನ್ನು ಕಡ್ಡಾಯಗೊಳಿಸಲಾಗಿದೆ. ಫೆ.15 ರಿಂದ ಎಲ್ಲಾ ವಾಹನಗಳಿಗೂ ಫಾಸ್ಟ್ಯಾಗ್ ಕಡ್ಡಾಯವಾಗಿದ್ದು ಇಲ್ಲದಿದ್ದರೆ ಎರಡುಪಟ್ಟು ಶುಲ್ಕ ಪಾವತಿಸಬೇಕಿದೆ.
ಈ ಹಿಂದೆ ಎರಡು, ಮೂರು ಸಲ ಫಾಸ್ಟ್ಯಾಗ್ ನೋಂದಣಿ ದಿನಾಂಕವನ್ನು ವಿಸ್ತರಿಸಲಾಗಿದ್ದು ಈಗ ಮತ್ತೆ ವಿಸ್ತರಿಸುವು ದಿಲ್ಲ. ಎಲ್ಲರೂ ಫಾಸ್ಟ್ಯಾಗ್ ಖರೀದಿಸಬೇಕು ಎಂದು ಗಡ್ಕರಿ ತಿಳಿಸಿದ್ದಾರೆ.