Friday, 22nd November 2024

ಹೆಚ್ಚಿನ ಲಗೇಜಿಗೆ ಶುಲ್ಕವಿಲ್ಲ: ರೈಲ್ವೆ ಇಲಾಖೆ ಸ್ಪಷ್ಟನೆ

ನವದೆಹಲಿ: ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಗೇಜ್‌ ತೆಗೆದುಕೊಂಡು ಹೋಗುವ ಪ್ರಯಾಣಿಕರಿಗೆ ದಂಡ ವಿಧಿಸುವ ಕ್ರಮದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿದೆ ಎಂದು ವರದಿಯಾಗಿದೆ.

ಇಲಾಖೆಯು ಹೆಚ್ಚಿನ ಲಗೇಜಿಗೆ ಶುಲ್ಕವನ್ನು ವಿಧಿಸಲು ಮುಂದಾಗಿತ್ತು, ಆದರೆ ರೈಲ್ವೆ ಪ್ರಯಾಣಿಕರ ವ್ಯಾಪಕ ವಿರೋಧ ಬಳಿಕ ತನ್ನ ಹೇಳಿಕೆಯನ್ನು ವಾಪಸ್ಸು ಪಡೆದು ಕೊಳ್ಳಲು ಮುಂದಾಗಿದೆ.

ಇತ್ತೀಚೆಗೆ ರೈಲ್ವೆಯ ಲಗೇಜ್ ನೀತಿಯನ್ನು ಬದಲಾಯಿಸಲಾಗಿದೆ ಎಂದು ಕೆಲವು ಸಾಮಾ ಜಿಕ ಮಾಧ್ಯಮ / ಡಿಜಿಟಲ್ ಸುದ್ದಿ ಪ್ಲಾಟ್ಫಾರ್ಮ್ಗಳಲ್ಲಿ ಭಾರತೀಯ ರೈಲ್ವೆ ನ್ಯೂಸ್ ವರದಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಮತ್ತು ಅಸ್ತಿತ್ವ ದಲ್ಲಿರುವ ಲಗೇಜ್ ನೀತಿಯನ್ನು 10 ವರ್ಷಗಳಿಗಿಂತ ಹೆಚ್ಚು ಕಾಲ ಜಾರಿಗೆ ತರಲಾಗಿದೆ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ ಅಂತ ತಿಳಿಸಿದೆ.

ಕೆಲವು ದಿನಗಳ ಹಿಂದೆ ಭಾರತೀಯ ರೈಲ್ವೆಯು ಪ್ರಯಾಣಿಕರ ಲಗೇಜ್‌ ನೀತಿಯನ್ನು ಬದಲಾಯಿಸಿದ್ದು, ಈಗ ಪ್ರಯಾಣಿಕರು ಮಿತಿಗೆ ಅನುಗುಣವಾಗಿ ತಮ್ಮೊಂದಿಗೆ ಲಗೇಜು ತೆಗೆದುಕೊಂಡು ಹೋಗಬೇಕಾಗಿದೆ ಅಂತ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು.

ಆದರೆ ವಿವಾದಕ್ಕೆ ನಾಂದಿ ಹಾಡಿರುವ ಭಾರತೀಯ ರೈಲ್ವೆ ಇಲಾಖೆ ಈ ರೀತಿಯ ಪ್ರಸ್ತಾವನೆಗಳು ನಮ್ಮ ಮುಂದೆ ಇಲ್ಲ ಎಂದಿದೆ.