Friday, 22nd November 2024

ಕೃಷಿ ಕಾಯ್ದೆಗಳ ರದ್ದತಿಯಿಲ್ಲ ಎಂದ ಸಚಿವ ತೋಮರ್

ನವದೆಹಲಿ: ಇದೇ ತಿಂಗಳ 19 ರಂದು 10ನೇ ಸುತ್ತಿನ ಮಾತುಕತೆಯಲ್ಲಿ ಕೃಷಿ ಕಾಯ್ದೆಗಳ ರದ್ದತಿ ಹೊರತುಪಡಿಸಿ ಬೇರೇನು ಬಯಸುತ್ತಿದ್ದಾರೆ ಎಂದು ಕೇಳಲಿದ್ದೇವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ಈಗಾಗಲೇ ಎಪಿಎಂಸಿ ಮಾರುಕಟ್ಟೆಗಳ ಕುರಿತು ಅವರ ಬೇಡಿಕೆಗಳನ್ನ ಒಪ್ಪಿದ್ದೇವೆ ಎಂದು ತಿಳಿಸಿದರು.

ಸುಪ್ರೀಂಕೋರ್ಟ್​ ತಡೆಯಾಜ್ಞೆ ಇರುವ ಕಾರಣ ಕೃಷಿ ಕಾಯ್ದೆಗಳನ್ನ ಜಾರಿಗೊಳಿಸಲು ಸಾಧ್ಯವಾಗದು. ಆದರೆ, ದೇಶದ ಬಹುತೇಕ ರೈತರು ಮತ್ತು ರೈತ ಸಂಘಟನೆಗಳು ಕೃಷಿ ಕಾಯ್ದೆಗಳ ಪರವಾಗಿವೆ ಎಂದರು.

ಒಂದು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ಪ್ರತಿಭಟನೆಯಲ್ಲಿ ತೊಡಗಿರುವ ರೈತರ ಜತೆ ಕೇಂದ್ರ ಸರ್ಕಾರ ಸೂಕ್ತವಾದ ರೀತಿಯಲ್ಲಿ ಒಪ್ಪಂದಕ್ಕೆ ಬಾರದ ಕಾರಣ, ಸುಪ್ರೀಂ ಕೋರ್ಟ್‌ ಪೀಠ, ಕಾಯಿದೆ ಜಾರಿಗೆ ತಡೆಯಾಜ್ಞೆ ನೀಡಿದೆ.ಹಾಗೂ ಸಮಸ್ಯೆ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಿದೆ.