Saturday, 23rd November 2024

ಭಾರತದ ವಿಮಾನಗಳಿಗೆ ಆಗಸ್ಟ್ 2 ರವರೆಗೆ ನಿರ್ಬಂಧ ಹೇರಿದ ಯುಎಇ

ನವದೆಹಲಿ: ಕೋವಿಡ್-19 ಹಿನ್ನೆಲೆಯಲ್ಲಿ ಭಾರತದಿಂದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಗೆ ಸಂಚರಿಸುವ ವಿಮಾನಗಳನ್ನು ಆಗಸ್ಟ್ 2 ರವರೆಗೆ ನಿರ್ಬಂಧಿಸಲಾಗುವುದು ಎಂದು ಎತಿಹಾಡ್ ಏರ್ವೇಸ್ ಸೋಮವಾರ ತಿಳಿಸಿದೆ.

ಯುಎಇ ಅಧಿಕಾರಿಗಳ ನಿರ್ದೇಶನಗಳಿಗೆ ಅನುಗುಣವಾಗಿ ದಿನಾಂಕವನ್ನು ಮತ್ತೆ ವಿಸ್ತರಿಸಬಹುದು ಎಂದು ಏರ್ವೇಸ್ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿದೆ.

ಆಗಸ್ಟ್ 2 ರವರೆಗೆ ಭಾರತದಿಂದ ಆಗಮಿಸುವ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ದೃಢಿಕರಣವನ್ನು ಸ್ವೀಕರಿಸಿದ್ದೇವೆ ಎಂದು ಎತಿಹಾಡ್ ಏರ್ವೇಸ್ ಟ್ವೀಟರ್ ನಲ್ಲಿ ತಿಳಿಸಿದೆ. ಕೋವಿಡ್-19 ಡೆಲ್ಟಾ ರೂಪಾಂತರದಿಂದಾಗಿ ಭಾರತದಿಂದ ಬರುವ ಪ್ರಯಾಣಿಕ ವಿಮಾನಗಳ ನಿಷೇಧವನ್ನು ಇನ್ನೂ ಒಂದು ತಿಂಗಳು ವಿಸ್ತರಿಸುವುದಾಗಿ ಕೆನಡಾ ಸರ್ಕಾರ ಕಳೆದ ತಿಂಗಳು ಪ್ರಕಟಿಸಿತ್ತು.