Sunday, 15th December 2024

ಜ.7ರವರೆಗೆ ಬ್ರಿಟನ್‌ನಿಂದ ಭಾರತಕ್ಕೆ ವಿಮಾನಗಳ ಹಾರಾಟ ಬಂದ್‌

ನವದೆಹಲಿ : ದೇಶದಲ್ಲಿ ಬ್ರಿಟನ್ ರೂಪಾಂತರ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ತಾತ್ಕಾಲಿಕವಾಗಿ ಬ್ರಿಟನ್‌ ದೇಶದಿಂದ ವಿಮಾನಗಳ ಹಾರಾಟವನ್ನು ಜನವರಿ 7, 2021ರವರೆಗೆ ನಿಷೇಧ ಮಾಡಿ, ಕೇಂದ್ರ ವಿಮಾನಯಾನ ಸಚಿವಾ ಲಯ ಆದೇಶಿಸಿದೆ.

ಈ ಕುರಿತಂತೆ ಕೇಂದ್ರ ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿಯಾ ಟ್ವಿಟ್ ನಲ್ಲಿ ಮಾಹಿತಿ ನೀಡಿದ್ದು, 2021ರ ಜನವರಿ 7ರವರೆಗೆ ವಿಮಾನಹಾರಾಟ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.