Thursday, 12th December 2024

ಭಾರತದಿಂದ ವಿಮಾನಗಳಿಗೆ ಸೆಪ್ಟೆಂಬರ್ 21 ರವರೆಗೆ ನಿಷೇಧ ಹೇರಿದ ಕೆನಡಾ

ನವದೆಹಲಿ : ಐದನೇ ಬಾರಿಗೆ ಕೆನಡಾ ಸರ್ಕಾರವು ಭಾರತದಿಂದ ವಾಣಿಜ್ಯ ಮತ್ತು ಖಾಸಗಿ ವಿಮಾನಗಳ ಮೇಲಿನ ನಿಷೇಧವನ್ನು ಸೆಪ್ಟೆಂಬರ್ 21 ರವರೆಗೆ ವಿಸ್ತರಿಸಿದೆ. ಭಾರತದಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾ ಕೈಗೊಂಡಿದೆ.

ವಿಮಾನಗಳ ಮೇಲಿನ ನಿಷೇಧವು ಆ.21 ರಂದು ಕೊನೆಗೊಳ್ಳಬೇಕಾಗಿತ್ತು, ಆದರೆ ಭಾರತದಲ್ಲಿ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಕೆನಡಾ ಸರ್ಕಾರವು ಸೆಪ್ಟೆಂಬರ್ 21 ರವರೆಗೆ ವಿಸ್ತರಿಸಿದೆ.

ಕೆನಡಾ ಸರ್ಕಾರವು ಏಪ್ರಿಲ್ 22ವರೆಗೆ ಮೊದಲ ನಿಷೇಧ ಹೇರಿತ್ತು. ಬಳಿಕ ಐದು ಬಾರಿ ನಿಷೇಧವನ್ನು ವಿಸ್ತರಿಸಲಾಗಿದೆ. ಈ ನಿಷೇಧವು ಸರಕು ವಿಮಾನಗಳು ಅಥವಾ ವೈದ್ಯಕೀಯ ಸಲಕರಣೆಗಳ ವರ್ಗಾವಣೆಗೆ ಅನ್ವಯಿಸುವುದಿಲ್ಲ ಎಂದು ಸರ್ಕಾರ ಹೇಳಿದೆ.