ನವದೆಹಲಿ: ಇಲೊಬ್ಬ ವ್ಯಕ್ತಿಗೆ ಆತ ಸಸ್ಯಾಹಾರಿ ಎಂಬ ಒಂದೇ ಕಾರಣಕ್ಕೆ ಆರೋಗ್ಯ ವಿಮೆ ಸೌಲಭ್ಯವನ್ನು ತಿರಸ್ಕರಿಸಲಾಗಿದೆ.
ವಿಮೆದಾರನು ಸಸ್ಯಾಹಾರಿಯಾದ ಕಾರಣದಿಂದಲೇ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ಹಾಗಾಗಿ ಆತನ ಮೆಡಿಕ್ಲೈಮ್ ಅನ್ನು ಒಪ್ಪಲು ಸಾಧ್ಯವಿಲ್ಲ,’ ಎಂದು ವಿಮೆ ಕಂಪನಿ ಮೆಡಿಕ್ಲೈಮ್ ಅ#ನ್ನು ತಿರಸ್ಕರಿಸಿತ್ತು. ಆದರೆ, ಮಧ್ಯ ಪ್ರವೇಶಿಸಿದ ಜಿಲ್ಲಾ ಗ್ರಾಹಕ ಆಯೋಗವು ಕಂಪನಿಯ ವಾದವನ್ನು ತಳ್ಳಿಹಾಕಿದೆ. ಸಂತ್ರಸ್ತ ವ್ಯಕ್ತಿಗೆ ಬಡ್ಡಿ ಸಮೇತ ವಿಮೆ ಮೊತ್ತವನ್ನು ಪಾವತಿಸುವಂತೆ ಆದೇಶಿಸಿದೆ.
‘ಸಸ್ಯಾಹಾರಿಯಾಗಿರುವುದು ಅಪರಾಧವಲ್ಲ ಮತ್ತು ಕಂಪನಿಯು ಅವರ ಮೆಡಿಕ್ಲೈಮ್ ಕ್ಲೈಮ್ ಅನ್ನು ತಿರಸ್ಕರಿಸಲು ತಪ್ಪು ಕಾರಣ ನೀಡಿದೆ’ ಎಂದು ಆಯೋಗ ಹೇಳಿದೆ.
ಮೀಟ್ ಠಕ್ಕರ್ ಎಂಬ ವ್ಯಕ್ತಿ 2015ರ ಅಕ್ಟೋಬರ್‌ನಲ್ಲಿ ಒಂದು ವಾರ ಚಿಕಿತ್ಸೆ ಪಡೆದಿದ್ದರು. ಅವರು ತಲೆಸುತ್ತು, ವಾಕರಿಕೆ, ದೇಹದ ಕೆಲ ಭಾಗದಲ್ಲಿ ದುರ್ಬಲತೆ ಹೊಂದಿದ್ದರು. ಅವರು ತಾತ್ಕಾಲಿಕ ರಕ್ತಕೊರತೆಯ ಸಮಸ್ಯೆಯನ್ನೂ ಹೊಂದಿದ್ದರು. ಅವರ ಚಿಕಿತ್ಸೆಗೆ ಮೆಡಿಕಲ್ ಬಿಲ್ ಒಂದು ಲಕ್ಷ ರೂಪಾಯಿಯವರೆಗೂ ದಾಟಿತ್ತು. ಆದರೆ ಆರೋಗ್ಯ ವಿಮಾ ಕಂಪನಿ ನ್ಯೂ ಇಂಡಿಯಾ ಅಶ್ಯೂರೆಸ್ಸ್ ಲಿಮಿಟೆಡ್ ಮೆಡಿಕ್ಲೈಮ್ ಅನ್ನು ತಿರಸ್ಕರಿಸಿತು.