ನವದೆಹಲಿ : ಭಾರತ ಸರ್ಕಾರ ಫೆಬ್ರವರಿ 28ರ ರಾತ್ರಿ 11.59ರ ವರೆಗೆ ನಿಗದಿತ ವಾಣಿಜ್ಯ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ನಿಷೇಧಿಸಿದೆ. ಆದರೆ, ಈ ನಿರ್ಬಂಧ ಅಂತಾರಾಷ್ಟ್ರೀಯ ಸರಕು ಸಾಗಾಟ ವ್ಯವಹಾರಗಳಿಗೆ ಅನ್ವಯಿಸುವುದಿಲ್ಲ ಎಂಬುದಾಗಿ ತಿಳಿಸಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಈ ಆದೇಶ ಹೊರಬಿದ್ದಿದೆ.
ಈ ಸಂಬಂಧ ಪರಿಷ್ಕೃತ ಆದೇಶ ಹೊರಡಿಸಿರುವ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಅಂತಾರಾ ಷ್ಟ್ರೀಯ ನಿಗದಿತ ಮಾರ್ಗಗಳಲ್ಲಿ ನಿಗದಿತ ಮಾರ್ಗಗಳಲ್ಲಿ ‘ಸಕ್ಷಮ ಪ್ರಾಧಿಕಾರ’ (ಕೇಸ್-ಟು ಕೇಸ್ ಆಧಾರದ ಮೇಲೆ) ವಿಮಾನ ಹಾರಾಟಕ್ಕೆ ಅವಕಾಶ ನೀಡಬಹುದು ಎಂದು ಹೇಳಿದೆ.
ಇನ್ನೂ ಮುಂದುವರೆದು, ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ, ಭಾರತಕ್ಕೆ ಅಂತರಾಷ್ಟ್ರೀಯ ವಿಮಾನಗಳ ಸಂಚಾರವನ್ನು ಫೆಬ್ರವರಿ 28, 2021ರವರೆಗೆ ನಿಷೇಧಿಸಲಾಗಿದೆ ಎಂಬುದಾಗಿ ಆದೇಶಿಸಿದೆ.