ನವದೆಹಲಿ: 75 ವರ್ಷ ಮೇಲ್ಪಟ್ಟವರಿಗೆ ಆದಾಯ ತೆರಿಗೆಯಿಂದ ಕೇಂದ್ರ ಸರ್ಕಾರ ವಿನಾಯಿತಿ ನೀಡಿದ್ದು, ಐಟಿ ರಿಟರ್ನ್ಸ್ ಸಲ್ಲಿಸುವಂತಿಲ್ಲ ಎಂದು ಬಜೆಟ್ನಲ್ಲಿ ಘೋಷಿಸಲಾಗಿದೆ.
75 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರ ಮೇಲಿನ ಹೊರೆಯನ್ನು ಕಡಿಮೆಗೊಳಿಸುತ್ತೇವೆ. ಪಿಂಚಣಿ ಮತ್ತು ಬಡ್ಡಿ ಆದಾಯ ಹೊಂದಿರುವ ಹಿರಿಯ ನಾಗರಿಕರು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದರಿಂದ ವಿನಾಯಿತಿ ನೀಡುವುದಾಗಿ ವಿತ್ತ ಸಚಿವೆ ಹೇಳಿದರು.
ತೆರಿಗೆ ದರ & ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ತೆರಿಗೆ ಆಡಿಟ್ ಮಿತಿ 10 ಕೋಟಿ ರೂ.ಗೆ ಏರಿಕೆ. ಆಡಿಟ್‌ನಲ್ಲಿ ಎನ್‌ಆರ್‌ಐಗಳಿಗೆ ವಿನಾಯ್ತಿ, ತೆರಿಗೆ ವಂಚನೆ ಮಾಡುವವರ ಪತ್ತೆಗೆ ತಂತ್ರಜ್ಞಾನ ಬಳಕೆ ಹಾಗೂ * ತೆರಿಗೆ ವ್ಯಾಜ್ಯ ಇತ್ಯರ್ಥಕ್ಕೆ ಖುದ್ದು ಟ್ರಿಬ್ಯುನಲ್ ಬ್ಯುರೋಗೆ ಹೋಗುವಂತಿಲ್ಲ.