Saturday, 14th December 2024

75 ವರ್ಷ ಮೇಲ್ಪಟ್ಟವರಿಗೆ ಆದಾಯ ತೆರಿಗೆಯಿಂದ ವಿನಾಯಿತಿ

ನವದೆಹಲಿ: 75 ವರ್ಷ ಮೇಲ್ಪಟ್ಟವರಿಗೆ ಆದಾಯ ತೆರಿಗೆಯಿಂದ ಕೇಂದ್ರ ಸರ್ಕಾರ ವಿನಾಯಿತಿ ನೀಡಿದ್ದು, ಐಟಿ ರಿಟರ್ನ್ಸ್​ ಸಲ್ಲಿಸುವಂತಿಲ್ಲ ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ.

75 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರ ಮೇಲಿನ ಹೊರೆಯನ್ನು ಕಡಿಮೆಗೊಳಿಸುತ್ತೇವೆ. ಪಿಂಚಣಿ ಮತ್ತು ಬಡ್ಡಿ ಆದಾಯ ಹೊಂದಿರುವ ಹಿರಿಯ ನಾಗರಿಕರು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದರಿಂದ ವಿನಾಯಿತಿ ನೀಡುವುದಾಗಿ ವಿತ್ತ ಸಚಿವೆ ಹೇಳಿದರು.

ತೆರಿಗೆ ದರ & ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ತೆರಿಗೆ ಆಡಿಟ್‌ ಮಿತಿ 10 ಕೋಟಿ ರೂ.ಗೆ ಏರಿಕೆ. ಆಡಿಟ್‌ನಲ್ಲಿ ಎನ್‌ಆರ್‌ಐಗಳಿಗೆ ವಿನಾಯ್ತಿ, ತೆರಿಗೆ ವಂಚನೆ ಮಾಡುವವರ ಪತ್ತೆಗೆ ತಂತ್ರಜ್ಞಾನ ಬಳಕೆ ಹಾಗೂ * ತೆರಿಗೆ ವ್ಯಾಜ್ಯ ಇತ್ಯರ್ಥಕ್ಕೆ ಖುದ್ದು ಟ್ರಿಬ್ಯುನಲ್ ಬ್ಯುರೋಗೆ ಹೋಗುವಂತಿಲ್ಲ.