Thursday, 19th September 2024

ಅಧಿಕಾರ ಬಯಸಲ್ಲ, ಜನತೆಯ ಸೇವೆ ಮಾಡಲು ಬಯಸುತ್ತೇನೆ: ಪ್ರಧಾನಿ ಮೋದಿ

Mann Ki Maat

ನವದೆಹಲಿ: ನಾನು ಅಧಿಕಾರದಲ್ಲಿರಲು ಬಯಸಲ್ಲ, ಜನತೆಯ ಸೇವೆ ಮಾಡಲು ಬಯಸುತ್ತೇನೆ’ ಎಂದು ಪ್ರಧಾನಿ ಮೋದಿ ಅವರು #Mann Ki Baat, narendraModi‘ಮನ್ ಕಿ ಬಾತ್’ ನ 83ನೇ ಆವೃತ್ತಿಯಲ್ಲಿ ಹೇಳಿದರು.

ಆಯುಷ್ಮಾನ್ ಭಾರತ ಯೋಜನೆಯ ಫಲಾನುಭವಿಯೊಂದಿಗೆ ಸಂವಾದ ನಡೆಸಿದ ಅವರು, ಯೋಜನೆಯು ಬಡವರಿಗೆ ಆರೋಗ್ಯ ರಕ್ಷಣೆ ಸೌಲಭ್ಯಗಳನ್ನು ಪಡೆಯಲು ನೆರವಾಗುತ್ತಿದೆ ಎಂದರು. ಭಾರತದ ಸ್ಟಾರ್ಟ್ ಅಪ್ ಗಳ ಕುರಿತು ಮಾತನಾಡಿದ ಮೋದಿ, ಪ್ರಕೃತಿಯ ರಕ್ಷಣೆಗೆ ಒತ್ತು ನೀಡಿದರಲ್ಲದೆ ಸಶಸ್ತ್ರ ಪಡೆ ಗಳಿಗೆ ಗೌರವಗಳನ್ನೂ ಸಲ್ಲಿಸಿದರು.

ನಾವಿಂದು ಭಾರತದ ಬೆಳವಣಿಗೆಯ ಪಥದಲ್ಲಿ ತಿರುವಿನ ಹಂತದಲ್ಲಿದ್ದೇವೆ. ಯುವಜನರು ಉದ್ಯೋಗದ ಆಕಾಂಕ್ಷಿಗಳು ಮಾತ್ರ ವಲ್ಲ, ಉದ್ಯೋಗಗಳ ಸೃಷ್ಟಿಕರ್ತರೂ ಆಗಿದ್ದಾರೆ. ಭಾರತದಲ್ಲಿ ಒಂದು ಶತ ಕೋಟಿ ಡಾ.ಗೂ ಹೆಚ್ಚಿನ ಮೌಲ್ಯದ 70ಕ್ಕೂ ಅಧಿಕ ಸ್ಟಾರ್ಟ್ ಅಪ್ ಗಳಿವೆ ಎಂದು ಹೇಳಿದರು.

‘ಇನ್ನೆರಡು ದಿನಗಳಲ್ಲಿ ಡಿಸೆಂಬರ್ ತಿಂಗಳು ಆರಂಭವಾಗಲಿದೆ. ನೌಕಾಪಡೆ ದಿನ ಮತ್ತು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸಲಿದೆ. ಡಿ.16ರಂದು ದೇಶವು 1971ರ ಯುದ್ಧದ ಸುವರ್ಣ ವರ್ಷ ಆಚರಿಸಲಿದೆ ಎನ್ನುವುದು ತಿಳಿದಿದೆ. ಈ ಸಂದರ್ಭದಲ್ಲಿ ನಮ್ಮ ಸಶಸ್ತ್ರ ಪಡೆಗಳನ್ನು ಸ್ಮರಿಸಿಕೊಳ್ಳಲು ನಾನು ಬಯಸುತ್ತೇನೆ’ ಎಂದರು.

ಭಾಷಣದ ಅಂತ್ಯದಲ್ಲಿ ಮೋದಿ, ಕೋವಿಡ್ ಸಾಂಕ್ರಾಮಿಕವು ಇನ್ನೂ ಮುಗಿದಿಲ್ಲ ಮತ್ತು ಜನರು ಎಚ್ಚರಿಕೆಯಿಂದ ಇರಬೇಕಿದೆ ಎಂದು ಹೇಳಿದರು.