Monday, 25th November 2024

ಫೆಬ್ರವರಿ 11ರವರೆಗೆ ರ‍್ಯಾಲಿ, ರೋಡ್ ಶೋಗಳಿಗೆ ನಿಷೇಧ

ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಗೆ ಭೌತಿಕ ರಾಜಕೀಯ ರ‍್ಯಾಲಿಗಳನ್ನು ಮತ್ತು ರೋಡ್ ಶೋಗಳ ಮೇಲಿನ ನಿಷೇಧವನ್ನು ಫೆಬ್ರವರಿ 11ರವರೆಗೆ ಭಾರತೀಯ ಚುನಾವಣಾ ಆಯೋಗ ವಿಸ್ತರಿಸಿದೆ.

ಆಯೋಗವು ಸಭೆ ನಡೆಸಿ ಚರ್ಚೆ ನಡೆಸಿದ್ದು, ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ರಾಜ್ಯಗಳಲ್ಲಿ ಮಾತ್ರವೇ ಚುನಾವಣಾ ಆಯೋಗವು ಗರಿಷ್ಠ 1000 ಜನರ ಸಾಮರ್ಥ್ಯವಿರುವ ಭೌತಿಕ ರ್ಯಾಲಿಗಳಿಗೆ ಅನುಮತಿ ನೀಡಿದೆ.

ಒಳಾಂಗಣ ಸಭೆಗಳು ಗರಿಷ್ಠ 500 ಜನರ ಸಾಮರ್ಥ್ಯವನ್ನು ವಿಧಿಸಿದೆ. ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ಇಪ್ಪತ್ತು ಜನರಿಗೆ ಅವಕಾಶ ನೀಡಿದೆ.

ಈ ಮೂಲಕ ದೇಶಾದ್ಯಂತ ಫೆಬ್ರವರಿ 11ರವರೆಗೆ Rallies ನಿಷೇಧಿಸಲಾಗಿದೆ.