Thursday, 12th December 2024

ಟೋಲ್​ ಪ್ಲಾಜಾ ರದ್ದು, ತಂತ್ರಜ್ಞಾನ ಆಧಾರಿತ ಶುಲ್ಕ: ನಿತಿನ್​ ಗಡ್ಕರಿ

ನವದೆಹಲಿ: ಕೇಂದ್ರ ಸರ್ಕಾರ ಮುಂದಿನ ಒಂದು ವರ್ಷದಲ್ಲಿ ದೇಶದಲ್ಲಿ ಎಲ್ಲಾ ಟೋಲ್​ ಪ್ಲಾಜಾಗಳನ್ನ ರದ್ದು ಮಾಡುವ ಯೋಜನೆಯ ಮೇಲೆ ಕೆಲಸ ಮಾಡುತ್ತಿದೆ. ಟೆಕ್ನಾಲಜಿ ಮೂಲಕವೇ ಟೋಲ್​​ ಶುಲ್ಕ ಪಾವತಿ ಮಾಡುವ ವ್ಯವಸ್ಥೆಯನ್ನ ಜಾರಿ ಮಾಡಲಿದ್ದೇವೆ ಎಂದು ಕೇಂದ್ರ ಸಚಿವ ನಿತಿನ್​ ಗಡ್ಕರಿ ಲೋಕಸಭೆಯಲ್ಲಿ ಹೇಳಿದ್ದಾರೆ.

ಬಿಎಸ್​ಪಿ ಸಂಸದ ಕುಂವರ್​ ದಾನಿಶ್​​ ಅಲಿ ಟೋಲ್​ ಪ್ಲಾಜಾ ವಿಚಾರವನ್ನ ಪ್ರಸ್ತಾಪಿಸಿದ ವೇಳೆ ಉತ್ತರಿಸಿದ ಗಡ್ಕರಿ, ಟೋಲ್ ಕೊನೆಗೊಳಿಸುವುದು ಎಂದರೆ ಟೋಲ್ ಪ್ಲಾಜಾವನ್ನು ಕೊನೆಗೊಳಿಸುವುದು ಎಂದು ಹೇಳಿದ್ದಾರೆ. ಜಿಪಿಎಸ್ ಸಹಾಯದಿಂದ ವಾಹನ ಟೋಲ್‌ ಶುಲ್ಕವಿರುವ ರಸ್ತೆಯನ್ನು ಏರುವ ಹಾಗೂ ಹೊರ ಹೋಗುವ ಫೋಟೋ ತೆಗೆದುಕೊಳ್ಳುತ್ತದೆ. ಇದರ ಆಧಾರದ ಮೇಲೆ ಶುಲ್ಕ ವಿಧಿಸಲಾಗುತ್ತದೆ ಎಂದರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಇಂತಹ ಟೋಲ್​ ಪ್ಲಾಜಾಗಳನ್ನ ನಿರ್ಮಿಸಲಾಗಿದೆ. ಫಾಸ್ಟ್​ಟ್ಯಾಗ್​ ವ್ಯವಸ್ಥೆ ದೇಶದಲ್ಲಿ ಸಂಪೂರ್ಣವಾಗಿ ಜಾರಿಗೆ ಬಂದ ಬಳಿಕ ಟೋಲ್​ ತೆಗೆದುಕೊಳ್ಳುವ ವ್ಯವಸ್ಥೆಯನ್ನ ಸಂಪೂರ್ಣವಾಗಿ ಬಂದ್​ ಮಾಡುತ್ತೇವೆ. ಬದಲಾಗಿ ಟೆಕ್ನಾಲಜಿ ಬಳಸೋಕೆ ನಾವು ಸಿದ್ಧತೆ ಮಾಡುತ್ತಿದ್ದೇವೆ.

ಎಲ್ಲಿಂದ ನೀವು ಹೆದ್ದಾರಿ ಬಳಕೆ ಆರಂಭಿಸಿದ್ದೀರಿ ಎನ್ನುವುದನ್ನು ಹಾಗೂ ನೀವು ಯಾವ ಸ್ಥಳದಿಂದ ಹೆದ್ದಾರಿಯಿಂದ ನಿರ್ಗಮಿಸಿ ದ್ದೀರಿ ಎಂಬ ಫೋಟೋ ಕೂಡ ಕ್ಲಿಕ್ಕಿಸಲಾಗುತ್ತೆ. ಇದನ್ನೆ ಆಧರಿಸಿ ನಿಮ್ಮ ಟೋಲ್​ ಶುಲ್ಕ ಡಿಜಿಟಲ್​ ವಿಧಾನದಲ್ಲಿ ಪಾವತಿಯಾಗ ಲಿದೆ ಎಂದು ವಿವರಿಸಿದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily