Thursday, 19th September 2024

ಸುದ್ದಿ ವಾಹಿನಿಗಳ ರೇಟಿಂಗ್ 3 ತಿಂಗಳು ಸ್ಥಗಿತ: ಬಾರ್ಕ್‌ ನಿರ್ಧಾರ

ನವದೆಹಲಿ: ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಟಿವಿ ಸುದ್ದಿ ವಾಹಿನಿಗಳ ರೇಟಿಂಗ್‌ ಗಳನ್ನು 3 ತಿಂಗಳ ಮಟ್ಟಿಗೆ ಸ್ಥಗಿತ ಗೊಳಿಸಲು ಬಾರ್ಕ್ ನಿರ್ಧರಿಸಿದೆ.

ಮುಂಬೈ ಪೊಲೀಸರು ತನಿಖೆ ಹಿನ್ನೆಲೆ ಹಾಗೂ ಹಲವು ಆರೋಪಗಳು ಬಂದಿರುವ ಕಾರಣದಿಂದ ಈ ನಿರ್ಧಾರಕ್ಕೆ ಬಾರ್ಕ್ ಬಂದಿದೆ. ಬಾರ್ಕ್ ನಿರ್ಧಾರವನ್ನು ರಾಷ್ಟ್ರೀಯ ಪ್ರಸರಣ ವಾಹಿನಿಗಳ ಸಂಘ ಸ್ವಾಗತಿಸಿದೆ. ಆದರೆ ರಾಜ್ಯವಾರು ದತ್ತಾಂಶಗಳನ್ನು ನೀಡುವುದನ್ನು ಮುಂದುವರೆಸುವು ದಾಗಿ ಬಾರ್ಕ್ ತಿಳಿಸಿದೆ.

ಆದರೆ ಬಾರ್ಕ್ ನ ಈ ನಿರ್ಧಾರ ಪ್ರಕಟಿಸುವ ಮುನ್ನ ಯಾವುದೇ ಸುದ್ದಿವಾಹಿನಿಗಳನ್ನು ಹೆಸರಿ ಸಲು ಅಥವಾ ದಾಖಲಿಸಲು ಮುಂದಾಗಿಲ್ಲ. ಮೂಲಗಳ ಪ್ರಕಾರ ತನಿಖಾ ವರದಿ ಆಧರಿಸಿ ಮುಂದಿನ ನಿರ್ಧಾರ ಪ್ರಕರಟಿಸಲು ಬಾರ್ಕ್ ನಿರ್ಧರಿಸಿದೆ ಎನ್ನಲಾ ಗಿದೆ.

ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿಯ ಇಬ್ಬರು ಹಿರಿಯ ಸಂಪಾದಕರಿಗೆ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.

ಬುಧವಾರ ಸಂಜೆ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ನಲ್ಲಿ ತಿಳಿಸಲಾಗಿದೆ. ಬಳಕೆದಾರರಿಗೆ ನಿರ್ದಿಷ್ಟ ರಿಪಬ್ಲಿಕ್ ಚಾನೆಲ್‌ನ್ನೇ ನೋಡಲು ಬಳಕೆದಾರರಿಗೆ ಹಣ ನೀಡುತ್ತಿರುವ ಬಗ್ಗೆ ಹನ್ಸ್ ರಿಸರ್ಚ್ ಟೀಮ್ ದೂರು ದಾಖಲಿಸಿತ್ತು. ಇದನ್ನು ಆಧರಿಸಿ ಡಿಪಬ್ಲಿಕ್ ಟಿವಿಯ ಹಿರಿಯ ಸಂಪಾದಕರಾದ ನಿರಂಜನ್ ನಾರಾಯಣಸ್ವಾಮಿ ಹಾಗೂ ಅಭಿಷೇಕ್ ಕಪೂರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಇದಲ್ಲದೆ ಇತ್ತೀಚೆಗೆ ಹನ್ಸ್ ರಿಸರ್ಚ್ ಗ್ರೂಪ್‌ಗೆ ಸಂಬಂಧಿಸಿದ ವಿಡಿಯೋವೊಂದನ್ನು ಅನುಮತಿ ಇಲ್ಲದೆ ಬಳಸಿದ ಬಗ್ಗೆಯೂ ವಿವರಣೆ ಕೇಳಲು ಪೊಲೀಸರು ನಿರ್ಧರಿಸಿದ್ದಾರೆ.

Leave a Reply

Your email address will not be published. Required fields are marked *