Monday, 16th September 2024

ವಿಪಕ್ಷಗಳ ಅವಿಶ್ವಾಸ ನಿರ್ಣಯ ಪ್ರಸ್ತಾವನೆಗೆ ಸ್ಪೀಕರ್‌ ಅಂಗೀಕಾರ

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್ ಅವರು ಮಂಡಿಸಿದ ಅವಿಶ್ವಾಸ ನಿರ್ಣಯ ವನ್ನು ಲೋಕಸಭೆಯ ಸಭಾಧ್ಯಕ್ಷ ಓಂ ಬಿರ್ಲಾ ಅಂಗೀಕರಿಸಿದ್ದಾರೆ.

ನಿಯಮಗಳ ಅಡಿಯಲ್ಲಿ ಅವಿಶ್ವಾಸ ನಿರ್ಣಯಕ್ಕೆ 50ಕ್ಕೂ ಹೆಚ್ಚು ಸಂಸದರ ಬೆಂಬಲ ಬೇಕು.

ಸಂಸದರ ಸಂಖ್ಯೆಯನ್ನು ಎಣಿಕೆ ಮಾಡಿದ ಬಳಿಕ ಬಿರ್ಲಾ ಅಂಗೀಕಾರ ನೀಡಿದ್ದು, ಚರ್ಚೆಯ ಸಮಯವನ್ನು ನಿಗದಿಪಡಿಸಿ ಸದನಕ್ಕೆ ತಿಳಿಸಲಾಗುವುದು ಎಂದು ಹೇಳಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಸದನ ಆರಂಭವಾಗುತ್ತಿದ್ದಂತೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಗೊಗೊಯ್ ಅವರಿಂದ ನೋಟಿಸ್ ಸ್ವೀಕರಿಸಲಾಗಿದೆ ಎಂದು ಸ್ಪೀಕರ್ ಹೇಳಿದರು.

ಇದೇ ವೇಳೆ, ನಿರ್ಣಯದ ಅಂಗೀಕಾರ ಬೆಂಬಲಿಸುವ ಸದಸ್ಯರನ್ನು ಎದ್ದು ನಿಲ್ಲುವಂತೆ ಬಿರ್ಲಾ ಕೋರಿದರು. ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಸದಸ್ಯರು ತಲೆ ಎಣಿಕೆ ಗಾಗಿ ಎದ್ದು ನಿಂತರು. ಸಂಸದರ ಸಂಖ್ಯೆಯನ್ನು ಎಣಿಕೆ ಮಾಡಿದ ಸ್ಪೀಕರ್ ನಿರ್ಣಯವನ್ನು ಒಪ್ಪಿಕೊಂಡರು.

ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯವು ಅಂಕಿಅಂಶ ಪರೀಕ್ಷೆಯಲ್ಲಿ ಸೋಲುತ್ತದೆಯಾದರೂ ಚರ್ಚೆಯ ಸಮಯದಲ್ಲಿ ಮಣಿಪುರ ವಿಷಯದ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದು ವಿಪಕ್ಷಗಳ ತಂತ್ರವಾಗಿದೆ. ಅಲ್ಲದೆ, ಮಣಿಪುರ ಹಿಂಸಾ ಚಾರದ ಬಗ್ಗೆ ಸದನದಲ್ಲಿ ಮೋದಿಯವರ ಬಾಯಿ ಬಿಡಿಸುವುದು ಇದರ ಹಿಂದಿನ ಕಾರ್ಯತಂತ್ರವಾಗಿದೆ ಎಂದೂ ಹೇಳಿದ್ದಾರೆ.

Leave a Reply

Your email address will not be published. Required fields are marked *