Sunday, 15th December 2024

ಈ ಗ್ರಾಮದಲ್ಲಿ ಐದು ದಶಕಗಳಿಂದ ದೀಪಾವಳಿ ಆಚರಿಸಲಾಗುತ್ತಿಲ್ಲ…!

ಬಟಿಂಡಾ: ಪಂಜಾಬ್​ನ ಬಟಿಂಡಾದ ಕೆಲವು ಗ್ರಾಮಗಳಲ್ಲಿ ದೀಪಾವಳಿ ಆಚರಿಸಿ ದಶಕಗಳೇ ಕಳೆದುಹೋಗಿವೆ.

ದೇಶಾದ್ಯಂತ ಎಲ್ಲರೂ ಸಂಭ್ರಮದಿಂದ ದೀಪಾವಳಿ ಆಚರಿಸಿದರೆ, ಬಟಿಂಡಾದ ಕೆಲವು ಗ್ರಾಮಗಳಲ್ಲಿ ದೀಪಾವಳಿಯನ್ನು ಆಚರಣೆಗೆ ನಿರ್ಬಂಧವಿದೆ. ಪಟಾಕಿ ಸಿಡಿಸುವುದಕ್ಕೂ ಜಿಲ್ಲಾಡಳಿತ ನಿಷೇಧ ಹೇರಿದೆ.

ಬಟಿಂಡಾದ ಫೂಸ್​ ಮಂದಿ, ಭಾಗು, ಗುಲಾಬ್​ಗಢ ಗ್ರಾಮಗಳಲ್ಲಿ ದೀಪಾವಳಿ ಆಚರಿಸಿ ಸಾಕಷ್ಟು ವರ್ಷಗಲೇ ಉರುಳಿ ಹೋಗಿವೆ. ಈ ಗ್ರಾಮಗಳ ಬಳಿ ಸೇನೆಯ ಕಂಟೋನ್ಮೆಂಟ್​ ಪ್ರದೇಶ ಮತ್ತು ಮದ್ದು ಗುಂಡುಗಳ ಡಿಪೋ ಇರುವುದರಿಂದ ಜಿಲ್ಲಾಡಳಿತ ದೀಪಾವಳಿ ಆಚರಣೆ ನಿಷೇಧಿಸಿದೆ. ಇದರಿಂದಾಗಿ ಗ್ರಾಮಸ್ಥರು ಕಳೆದ 50 ವರ್ಷಗಳಿಂದ ಬೆಳಕಿನ ಹಬ್ಬ ಆಚರಿಸಿಯೇ ಇಲ್ಲ. ಯಾರಾದರೂ ಪಟಾಕಿ ಸಿಡಿಸಿದರೆ ಅಂಥವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳುತ್ತದೆ. ಪ್ರತಿ ವರ್ಷವೂ ದೀಪಾವಳಿ ಆಚರಿಸದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗುತ್ತದೆ.

ಮಕ್ಕಳು ದೀಪಾವಳಿ ಆಚರಣೆಗೆ ಮತ್ತು ಪಟಾಕಿ ಸಿಡಿಸಲು ಒತ್ತಾಯಿಸಿದರೆ ಅವರನ್ನು ಸಂಬಂಧಿಕರ ಮನೆಗೆ ಕಳುಹಿಸಲಾಗುತ್ತದೆ. ಈ ಮಿಲಿಟರಿ ಕಂಟೋ ನ್ಮೆಂಟ್​ ಪ್ರದೇಶವನ್ನು ಬಟಿಂಡಾದಲ್ಲಿ 1976ರಲ್ಲಿ ನಿರ್ಮಿಸಲಾಯಿತು.

ಫೂಸ್​ ಮಂಡಿ ಗ್ರಾಮದಲ್ಲಿ ಮದ್ದುಗುಂಡಗಳನ್ನು ಸಂಗ್ರಹಿಸಿ ಇಡಲಾಗಿದೆ. ಕೆಲವೊಮ್ಮೆ ಅವಧಿ ಮೀರಿದ ಗುಂಡುಗಳನ್ನು ನಾಶಪಡಿಸಲಾಗುತ್ತದೆ. ಈ ಮದ್ದುಗುಂಡುಗಳು ಗ್ರಾಮಗಳಿಗೆ ಸಿಡಿಯುತ್ತದೆ. ಇದರಿಂದ ಗ್ರಾಮಸ್ಥರಿಗೆ ತೊಂದರೆ ಉಂಟಾಗುತ್ತದೆ. ಗ್ರಾಮಗಳಲ್ಲಿರುವ ಮನೆಗಳ ನಕ್ಷೆಯನ್ನು ಮಿಲಿಟರಿ ಹೊಂದಿದೆ. ಇಲ್ಲಿ ಹೊಸ ಮನೆಗಳ ನಿರ್ಮಾಣಕ್ಕೆ ಅವಕಾಶವೂ ಇಲ್ಲ.