Monday, 18th November 2024

Noida Horror: ಮೂರು ವರ್ಷದ ಬಾಲಕಿ ಮೇಲೆ ಶಾಲೆಯಲ್ಲೇ ಲೈಂಗಿಕ ದೌರ್ಜನ್ಯ; ಭಾರೀ ಪ್ರತಿಭಟನೆ

noida horror

ನೋಯ್ಡಾ: ಬದ್ಲಾಪುರದ ಘಟನೆ ಮಾಸುವ ಮುನ್ನವೇ ನೋಯ್ಡಾ(Noida Horror)ದಲ್ಲೂ ಮೂರು ವರ್ಷದ ಬಾಲಕಿ ಮೇಲೆ ಶಾಲೆಯ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿರುವ ಹೀನ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಬಾಲಕಿ ಪೋಷಕರು ಸೇರದಂತೆ ಅನೇಕರು ಶಾಲೆಯ ಎದುರು ಉಗ್ರ ಪ್ರತಿಭಟನೆ ನಡೆಸಿದ್ದಾರೆ. ಪೋಷಕರ ಆರೋಪಕ್ಕೆ ಉತ್ತರಿಸಲು ಶಾಲಾ ಆಡಳಿತ ಮಂಡಳಿ ನಿರಾಕರಿಸಿರುವ ಹಿನ್ನೆಲೆ ಆಕ್ರೋಶಗೊಂಡ ಪೋಷಕರು ಶನಿವಾರ ಶಾಲೆಯ ಎದುರೇ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆ ಇತರ ಮಕ್ಕಳ ಪೋಷಕರೂ ಶಾಲೆಯ ಎದುರು ಜಮಾಯಿಸಿದ್ದಾರೆ.

ಇನ್ನು ಸಂತ್ರಸ್ತ ಬಾಲಕಿಯ ಪೋಷಕರು ಮಾಧ್ಯಮಗಳಿಗೆ ಬಹಿರಂಗ ಪತ್ರವನ್ನೂ ಬರೆದಿದ್ದು, ತಮ್ಮ ಮಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಕೋರಿದ್ದಾರೆ. ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಘಟನೆ ವಿವರ:

ಅಕ್ಟೋಬರ್ 4 ರಂದು ನೋಯ್ಡಾದ ಖಾಸಗಿ ಶಾಲೆಯಲ್ಲಿ ಈ ಹೀನ ಕೃತ್ಯ ನಡೆದಿದ್ದು, ಶಾಲೆಯ ಅಡುಗೆ ಸಿಬ್ಬಂದಿಯೋರ್ವಕೊಠಡಿಯೊಂದರಲ್ಲಿ ಕೂಡಿ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಮಗುವಿನ ಕಿರುಚಾಟ ಕೇಳಿದ ಮಹಿಳಾ ಸಿಬ್ಬಂದಿ ಕೊಠಡಿಗೆ ಪ್ರವೇಶಿಸಿದಾಗ, ವ್ಯಕ್ತಿ ಕಿಟಕಿಯಿಂದ ಹಾರಿ ಪರಾರಿಯಾಗಿದ್ದಾನೆ. ಈ ವಿಚಾರ ತಿಳಿದ ಶಿಕ್ಷಕರು ಮನೆಯಲ್ಲಿ ಹೇಳದಿರುವಂತೆ ಎಚ್ಚರಿಸಿ ಮಗುವನ್ನು ಮನೆಗೆ ಕಳುಹಿಸಿದ್ದಾರೆ.

ಮಗು ಅಕ್ಟೋಬರ್ 7 ರಂದು ಶಾಲೆಗೆ ಹೋಗಲು ನಿರಾಕರಿಸಿದಳು ಮತ್ತು ತನ್ನ ಖಾಸಗಿ ಅಂಗಗಳಲ್ಲಿ ನೋವಿರುವುದಾಗಿ ತನ್ನ ತಾಯಿಗೆ ಹೇಳಿದ್ದಾಳೆ. ತಕ್ಷಣ ಆಕೆಯನ್ನು ವೈದ್ಯರ ಬಳಿ ಕರೆದೊಯ್ದಾಗ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಬಯಲಾಗಿದೆ. ಮಗುವನ್ನು ಕೌನ್ಸೆಲಿಂಗ್‌ ಮಾಡಿದಾಗ ‘ಖಾನಾ ಭಯ್ಯಾ’ ತನ್ನ ಖಾಸಗಿ ಅಂಗಗಳಿಗೆ ಕೋಲಿನಿಂದ ಚುಚ್ಚಿದ್ದಾನೆ ಮತ್ತು ಇದು ಎರಡನೇ ಬಾರಿಗೆ ಸಂಭವಿಸಿದೆ ಎಂದು ಮಗು ಹೇಳಿದೆ. ಇನ್ನು ಪೋಷಕರು ಶಾಲೆಯಲ್ಲಿ ಹೋಗಿ ವಿಚಾರಿಸಿದಾಗ ಶಾಲಾ ಮುಖ್ಯೋಪಧ್ಯಾಯರು ಮತ್ತು ಶಿಕ್ಷಕರು ಅಸಡ್ಡೆ ತೋರಿದ್ದಾರೆ. ಹೀಗಾಗಿ ಪೋಷಕರು ಅಕ್ಟೋಬರ್‌9ರಂದು ಪೊಲೀಸರು ದೂರು ನೀಡಿದ್ದು, ಅವರ ದೂರಿನಾಧಾರದಲ್ಲಿ ಎಫ್‌ಐಆರ್‌ ದಾಖಲಾಗಿದೆ.

“ನಾನು ಅಕ್ಟೋಬರ್ 8 ರಂದು ತರಗತಿ ಶಿಕ್ಷಕರಿಗೆ ಕರೆ ಮಾಡಿ ಎರಡು ಘಟನೆಗಳ ಬಗ್ಗೆ ಕೇಳಿದೆ. ನನಗೆ ಆಶ್ಚರ್ಯವಾಗುವಂತೆ, ಶಿಕ್ಷಕರು ಘಟನೆಯನ್ನು ತಳ್ಳಿಹಾಕಲು ಪ್ರಯತ್ನಿಸಿದರು ಮತ್ತು ನನ್ನ ಮಗಳು ಆನ್‌ಲೈನ್‌ನಲ್ಲಿ ಅನುಚಿತ ವೀಡಿಯೊವನ್ನು ವೀಕ್ಷಿಸಿರಬಹುದು ಮತ್ತು ಘಟನೆಗಳನ್ನು ಅವಳಿಗೆ ನಡೆದಿರುವಂತೆ ಎಂದು ಹೇಳುತ್ತಿರಬಹುದು ಎಂದು ಹೇಳಿದರು. ಅವರ ಮಾತು ಕೇಳಿ ನನಗೆ ಆಘಾತವಾಯಿತು. ವೀಡಿಯೊವನ್ನು ನೋಡುವುದರಿಂದ ನನ್ನ ಮಗಳ ಖಾಸಗಿ ಭಾಗಗಳಲ್ಲಿ ಗಾಯಗಳಾಗಲು ಹೇಗೆ ಸಾಧ್ಯ ಎಂದು ನಾನು ಶಿಕ್ಷಕರನ್ನು ಕೇಳಿದೆ ಎಂದು ಮಗುವಿನ ತಾಯಿ ಹೇಳಿದ್ದಾರೆ.

ಇನ್ನು ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಯು ವಿಚಾರಣೆಗೊಳಪಡಿಸಿದ್ದು, ನಿತಾರಿ ಗ್ರಾಮದ 30 ವರ್ಷದ ವ್ಯಕ್ತಿಯನ್ನು ಅರೆಸ್ಟ್‌ ಮಾಡಲಾಗಿದೆ. ಆತನ ವಿರುದ್ಧ ಪೋಕ್ಸೋ ಕಾಯಿದೆಯಲ್ಲಿ ಕೇಸ್‌ ದಾಖಲಿಸಲಾಗಿದೆ.

ಪರಭಕ್ಷಕನನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ, ನಂತರ ಅವರನ್ನು ಬಂಧಿಸಲಾಯಿತು ಮತ್ತು BNS ಸೆಕ್ಷನ್ 65(2) (12 ವರ್ಷದೊಳಗಿನ ಮಹಿಳೆಯ ಮೇಲೆ ಅತ್ಯಾಚಾರ) ಮತ್ತು ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆರೋಪ ಹೊರಿಸಲಾಯಿತು. ಪೋಕ್ಸೊ ಕಾಯ್ದೆ, ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕೆಲವು ದಿನಗಳ ಹಿಂದೆ ಬದ್ಲಾಪುರದ ಶಾಲೆಯೊಂದರಲ್ಲಿ ಸಿಬ್ಬಂದಿಯೋರ್ವ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಆರೋಪಿ ಸಂಜಯ್‌ ಶಿಂಧೆಯ ಪೊಲೀಸರ ಎನ್‌ಕೌಂಟರ್‌ನಲ್ಲಿಹತನಾದ ಘಟನೆ ವರದಿಯಾಗಿತ್ತು.

ಈ ಸುದ್ದಿಯನ್ನೂ ಓದಿ: Badlapur Assault Case: ಬದ್ಲಾಪುರ ಎನ್‌ಕೌಂಟರ್‌; ಪೊಲೀಸರ ವಾದ ನಂಬೋಕೆ ಸಾಧ್ಯವೇ ಇಲ್ಲ- ಹೈಕೋರ್ಟ್‌ ಫುಲ್‌ ಗರಂ