Thursday, 12th December 2024

ಫಲಿತಾಂಶದಿಂದ ಆಘಾತವಾಗಿಲ್ಲ: ಶರದ್ ಪವಾರ್

ಪುಣೆ: ಮಹಾರಾಷ್ಟ್ರದ ಆರು ರಾಜ್ಯಸಭಾ ಸ್ಥಾನಗಳ ಪೈಕಿ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದ ಕುರಿತು ಪ್ರತಿಕ್ರಿಯಿಸಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಫಲಿತಾಂಶದಿಂದ ನಾನು ಆಘಾತಕ್ಕೊಳಗಾಗಲಿಲ್ಲ. ನಮ್ಮ ಪಕ್ಷವು ಬಿಜೆಪಿ ಬೆಂಬಲಿತ ಸ್ವತಂತ್ರ ಶಾಸಕರೊಬ್ಬರಿಂದ ಒಂದು ಹೆಚ್ಚುವರಿ ಮತ ಪಡೆದಿದೆ’ ಎಂದು ಹೇಳಿದರು.

ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಕೇಂದ್ರ ಸಚಿವ ಪಿಯೂಷ್ ಗೋಯಲ್ , ಮಾಜಿ ರಾಜ್ಯ ಸಚಿವ ಅನಿಲ್ ಬೋಂಡೆ ಹಾಗೂ ಧನಂಜಯ್ ಮಹಾದಿಕ್ ಜಯ ಗಳಿಸಿದ್ದಾರೆ.

ಶಿವಸೇನೆಯ ಸಂಜಯ್ ರಾವತ್, ಎನ್‌ಸಿಪಿಯ ಪ್ರಫುಲ್ ಪಟೇಲ್ ಮತ್ತು ಕಾಂಗ್ರೆಸ್‌ನ ಇಮ್ರಾನ್ ಪ್ರತಾಪ್‌ಘರ್ಹಿ ಕೂಡ ಗೆಲುವು ಸಾಧಿಸಿದ್ದಾರೆ.

ಪ್ರಫುಲ್ ಪಟೇಲ್ (ಎನ್‌ಸಿಪಿ) ಮಾತ್ರ ಒಂದು ಹೆಚ್ಚುವರಿ ಮತ ಪಡೆದರು. ಅದು ನಮ್ಮ ಮೈತ್ರಿಪಕ್ಷದ ಮತವಲ್ಲ, ಅದು ವಿಪಕ್ಷ ದಿಂದ ಬಂದಿದೆ ಎಂದು ಪವಾರ್ ತಿಳಿಸಿದರು.