Saturday, 16th November 2024

NPS Vatsalya Scheme: ಎನ್‌ಪಿಎಸ್ ವಾತ್ಸಲ್ಯ ಯೋಜನೆ; ಮಕ್ಕಳ ನಿವೃತ್ತಿ ಜೀವನವನ್ನು ಪೋಷಕರೇ ರೂಪಿಸಬಹುದು!

NPS Vatsalya Scheme

ಮಗುವಿನ ಭವಿಷ್ಯ ಚೆನ್ನಾಗಿರಬೇಕು, ನಾವು ಇಲ್ಲದೇ ಇದ್ದರೂ ಅವರಿಗೆ ಯಾವುದೇ ಆರ್ಥಿಕ ತೊಂದರೆಗಳು ಕಾಡಬಾರದು ಎಂಬುದು ಎಲ್ಲ ಪೋಷಕರ ಬಯಕೆ. ಇದಕ್ಕಾಗಿ ಎಷ್ಟು ಸಾಧ್ಯವೋ ಅಷ್ಟು ಹೂಡಿಕೆ ಮಾಡಲು ಪ್ರಯತ್ನಿಸುತ್ತೇವೆ. ಇದೀಗ ಮಕ್ಕಳ ನಿವೃತ್ತಿ ಜೀವನಕ್ಕೂ (NPS Vatsalya Scheme) ಹೂಡಿಕೆ ಮಾಡಬಹುದಾದ ಆಯ್ಕೆ ಪೋಷಕರಿಗೆ ಇದೆ.

ಮಕ್ಕಳ ಭವಿಷ್ಯಕ್ಕಾಗಿ ಏನಾದರೂ ದೊಡ್ಡ ಕೊಡುಗೆಯನ್ನು ನೀಡಲು ಬಯಸುವವರಿಗಾಗಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (National Pension System) ವಾತ್ಸಲ್ಯ ಯೋಜನೆಯನ್ನು (Vatsalya Scheme) ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (Pension Fund Regulatory and Development Authority ) ಪರಿಚಯಿಸಿದೆ.

ಎನ್‌ಪಿಎಸ್ ವಾತ್ಸಲ್ಯ ಯೋಜನೆ 2024

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದರು. ಮಕ್ಕಳ ಹುಟ್ಟುಹಬ್ಬದ ಉಡುಗೊರೆಯೊಂದಿಗೆ ಎನ್ ಪಿಎಸ್ ವಾತ್ಸಲ್ಯವನ್ನು ನೀಡುವಂತೆ ಅವರು ದೇಶದ ಜನರಿಗೆ ಮನವಿ ಮಾಡಿದರು. ಈ ರೀತಿಯ ಸೌಲಭ್ಯ ಈ ಹಿಂದೆ ಇದ್ದಿದ್ದರೆ ಇಂದಿನ ಹಿರಿಯ ನಾಗರಿಕರಿಗೆಲ್ಲ ಪಿಂಚಣಿ ಸಿಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

NPS Vatsalya Scheme

ಖಾತೆ ತೆರೆಯುವುದು ಹೇಗೆ?

ಪ್ರತಿಯೊಬ್ಬ ಪೋಷಕರು ತಮ್ಮ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಎನ್ ಪಿಎಸ್ ವಾತ್ಸಲ್ಯ ಯೋಜನೆಯಡಿ ವಾರ್ಷಿಕವಾಗಿ ಕೇವಲ 1,000 ರೂಪಾಯಿಗಳ ಹೂಡಿಕೆಯೊಂದಿಗೆ ಖಾತೆಯನ್ನು ತೆರೆಯಬಹುದು. ಮಗುವಿಗೆ 18 ವರ್ಷವಾದ ತಕ್ಷಣ ಖಾತೆಯೇ ಸಾಮಾನ್ಯ ಎನ್‌ಪಿಎಸ್ ಖಾತೆಯಾಗಿ ಪರಿವರ್ತನೆಯಾಗುತ್ತದೆ. ಈ ಎನ್‌ಪಿಎಸ್ ನಿಧಿಯನ್ನು 60 ವರ್ಷ ವಯಸ್ಸಿನ ಅನಂತರ ಮಗುವಿಗೆ ಪಿಂಚಣಿಯಾಗಿ ನೀಡಲಾಗುತ್ತದೆ.

ಎನ್‌ಪಿಎಸ್ ಖಾತೆಯಂತೆ ವಾತ್ಸಲ್ಯ ಯೋಜನೆಯ ಹಣವನ್ನು ಈಕ್ವಿಟಿ ಮತ್ತು ಸಾಲ ನಿಧಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಪ್ರಸ್ತುತ, ದೇಶದ ಜನಸಂಖ್ಯೆಯ ಶೇ. 31ರಷ್ಟು ಜನರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.

Stock Market: ನಿಫ್ಟಿ 10% ಕುಸಿತ, ಹೂಡಿಕೆದಾರರು ಏನು ಮಾಡಬಹುದು?

ವಾತ್ಸಲ್ಯ ಯೋಜನೆ ಪ್ರಮುಖ ಅಂಶಗಳು

ಉಳಿತಾಯ ಪಿಂಚಣಿ ಯೋಜನೆಯು ಪಿಎಫ್ ಆರ್ ಡಿಎನಿಂದ ನಿರ್ವಹಿಸಲ್ಪಡುತ್ತದೆ.

18 ವರ್ಷ ವಯಸ್ಸಿನವರೆಗಿನ ಎಲ್ಲಾ ಅಪ್ರಾಪ್ತ ನಾಗರಿಕರು ಅರ್ಹರಾಗಿದ್ದಾರೆ.

ಖಾತೆಯನ್ನು ತೆರೆಯಲು ವಾರ್ಷಿಕವಾಗಿ ಕೇವಲ 1000 ರೂ. ಹೂಡಿಕೆ ಮಾಡಬಹುದು. ಗರಿಷ್ಠ ಕೊಡುಗೆಗೆ ಮಿತಿಯಿಲ್ಲ.

ಖಾತೆಯನ್ನು ಯಾವುದೇ ಬ್ಯಾಂಕ್, ಪೋಸ್ಟ್ ಆಫೀಸ್ ಅಥವಾ ಇ-ಎನ್‌ಪಿಎಸ್ ಮೂಲಕ ತೆರೆಯಬಹುದು.

ಅಪ್ರಾಪ್ತ ವಯಸ್ಕರ ಜನ್ಮ ದಿನಾಂಕ, ಪ್ರಮಾಣ ಪತ್ರ, ಪೋಷಕರ ಕೆವೈಸಿಗಾಗಿ ಆಧಾರ್ ಮತ್ತು ಡ್ರೈವಿಂಗ್ ಲೈಸೆನ್ಸ್‌ನಂತಹ ಅಗತ್ಯ ದಾಖಲೆಗಳು

ಖಾತೆಯನ್ನು ಪಾಲಕರು ನಿರ್ವಹಿಸುತ್ತಾರೆ, ಆದರೆ ಫಲಾನುಭವಿಯು ಕೇವಲ ಅಪ್ರಾಪ್ತ ವಯಸ್ಕನಾಗಿರುತ್ತಾನೆ.

ಪಿಎಫ್ ಆರ್ ಡಿಎಯಲ್ಲಿ ನೋಂದಾಯಿಸಲಾದ ಪಿಂಚಣಿ ನಿಧಿಗಳಲ್ಲಿ ಯಾವುದಾದರೂ ಒಂದನ್ನು ಪೋಷಕರು ಆಯ್ಕೆ ಮಾಡಬಹುದು.

ಮಗುವಿಗೆ 18 ವರ್ಷ ವಯಸ್ಸಾದ ಮೇಲೆ ವಾತ್ಸಲ್ಯ ಯೋಜನೆಯು ಎಲ್ಲಾ ನಾಗರಿಕರೊಂದಿಗೆ ಎನ್ ಪಿಎಸ್ ಖಾತೆಯಾಗಿ ವರ್ಗಾವಣೆಯಾಗುತ್ತದೆ.