ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಮಹಾತ್ಮ ಗಾಂಧಿ(Mahatma Gandhi), ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರ ಆಕ್ಷೇಪಾರ್ಹ ವಿಡಿಯೋ(Objectionable Videos) ಪೋಸ್ಟ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ಪೊಲೀಸರು ಎಫ್‌ಐಆರ್(FIR) ದಾಖಲಾಗಿದೆ.
ತನ್ನನ್ನು ರಾಷ್ಟ್ರೀಯವಾದಿ, ಸಾಮಾಜಿಕ ಕಾರ್ಯಕರ್ತೆ ಮತ್ತು ಸಾರ್ವಜನಿಕ ಭಾಷಣಕಾರ ಎಂದು ಬಣ್ಣಿಸಿಕೊಳ್ಳುವ ಎಕ್ಸ್ ಬಳಕೆದಾರರಾದ ನೇಹಾ ಸಿಂಗ್ ರಾಥೋಡ್ ಅವರು ಮಂಗಳವಾರ ವೀಡಿಯೊವನ್ನು ಹಂಚಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ. ರಾಥೋಡ್ ವೀಡಿಯೊಗಳನ್ನು ಖಂಡಿಸಿದ್ದು, ಈ ವಿಡಿಯೋಗಳ ಸೃಷ್ಟಿಯ ಹಿಂದಿನ ಉದ್ದೇಶ ಏನೆಂಬುದನ್ನು ಪ್ರಶ್ನಿಸಿದರು.
ಉತ್ತರ ಪ್ರದೇಶದ ಜನಪ್ರಿಯ ಮತ್ತು ಯಶಸ್ವಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ರಾಜ್ಯದಲ್ಲಿ ಮಹಿಳೆಯರ ಗೌರವ, ಭದ್ರತೆ ಮತ್ತು ಸಬಲೀಕರಣಕ್ಕಾಗಿ ಅನೇಕ ಪ್ರಯತ್ನಗಳನ್ನು ಮಾಡಿದ್ದಾರೆ. ಕೆಲವು ಅಗ್ಗದ ಸ್ಟ್ರೀಟ್ ರೀಲರ್‌ಗಳು ವ್ಯೂಸ್‌ಗಾಗಿ ಯೋಗಿ ಜಿಯನ್ನು ಹೇಗೆ ಬಳಸಬಹುದು? ಇದಷ್ಟೇ ಅಲ್ಲ, ಅಗ್ಗದ ಜನಪ್ರಿಯತೆಗಾಗಿ ಪ್ರಧಾನಿ ಮತ್ತು ಮಹಾತ್ಮ ಗಾಂಧಿಯವರ ವೀಡಿಯೊಗಳನ್ನು ಹೇಗೆ ಎಡಿಟ್ ಮಾಡಿ ಅಪ್‌ಲೋಡ್ ಮಾಡಲಾಗುತ್ತಿದೆ” ಎಂದು ಅವರು ಪ್ರಶ್ನಿಸಿದ್ದಾರೆ.
उत्तर प्रदेश के लोकप्रिय यशस्वी मुख्यमंत्री योगी आदित्यनाथ जी महाराज अपने राज्य की बेटियों एवं बहनों की मान सम्मान, नारी सशक्तिकरण और सुरक्षा के लिए बहुतेरे प्रयास किए और प्रयासरत भी हैं,
— Neha Singh Rathore || नेहा सिंह राठौड़ (@imrowdy_rathore) September 24, 2024
लेकिन, कुछ चिंदी चोर सड़क छाप रिलर चंद व्यूज के लिए योगी जी का किस कदर इस्तेमाल कर रहे है… pic.twitter.com/HgAI1dzVwB
ಈ ವಿಡಿಯೋದಲ್ಲಿ ಮಹಾತ್ಮ ಗಾಂಧಿ, ಮೋದಿ ಮತ್ತು ಆದಿತ್ಯನಾಥ್ ಭೋಜ್‌ಪುರಿ ಹಾಡುಗಳಿಗೆ ನೃತ್ಯ ಮಾಡುವುದನ್ನು ಕಾಣಬಹುದಾಗಿದೆ. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ ರಾಥೋಡ್, ಈ ಅಗ್ಗದ ರಸ್ತೆ ರೀಲರ್ ವಿರುದ್ಧ ಯಾವಾಗ ಕ್ರಮ ತೆಗೆದುಕೊಳ್ಳಲಾಗುತ್ತದೆ? ಎಂದು ಕೇಳಿದಳು. ರಾಥೋಡ್ ಎಕ್ಸ್‌ನಲ್ಲಿ ಇನ್‌ಸ್ಟಾಗ್ರಾಮ್ ರೀಲ್‌ಗಳ ಸ್ಕ್ರೀನ್ ರೆಕಾರ್ಡಿಂಗ್ ಅನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಮಹಾತ್ಮ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೋಜ್‌ಪುರಿ ಹಾಡಿಗೆ ನೃತ್ಯ ಮತ್ತು ಹಾಡುತ್ತಿರುವುದನ್ನು ಕಾಣಬಹುದಾಗಿದೆ.
ಸೈಬರ್ ಠಾಣಾ ಮಾಧ್ಯಮ ಕೋಶದ ಉಸ್ತುವಾರಿ ಪ್ರವೀಣ್ ಸಿಂಗ್ ಅವರ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಝಾ ತಿಳಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಝಾ ಭರವಸೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಬೆಂಗಳೂರಿನಲ್ಲಿ ಮಹಿಳೆಯರು ಶಾರ್ಟ್ಸ್ ಧರಿಸುವಂತಿಲ್ವಾ? ಭಾರೀ ವೈರಲ್ ಆಗ್ತಿದೆ ಈ ವಿಡಿಯೋ