ನವದೆಹಲಿ: ಭಾರತದ ತೈಲ ಕಂಪೆನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿ. 30 ಲಕ್ಷ ಬ್ಯಾರೆಲ್ ತೈಲ ಖರೀ ದಿಗೆ ರಷ್ಯಾ ಜತೆ ಒಪ್ಪಂದ ಮಾಡಿಕೊಂಡಿದೆ.
ಯಾವುದೇ ದೇಶವು ಇಂಧನ ವಹಿವಾಟಿಗೆ ಸಂಬಂಧಿಸಿ ರಾಜಕೀಯ ಮಾಡ ಬಾರದು’ ಎಂದು ಕೇಂದ್ರ ಸರಕಾರ ಹೇಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಭಾರತದ ಕಂಪೆನಿಗಳು ರಷ್ಯಾದಿಂದ ತೈಲ ಖರೀದಿಸುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ನಿರ್ಬಂಧ ದಿಂದಾಗಿ ರಷ್ಯಾದ ಆರ್ಥಿಕತೆಗೆ ಹೊಡೆತ ಬಿದ್ದಿರುವ ಕಾರಣ, ಭಾರತ ಸಹಿತ ದೊಡ್ಡ ಮಟ್ಟದ ಆಮದುದಾರರಿಗೆ ರಿಯಾಯಿತಿ ದರದಲ್ಲಿ ತೈಲ ಮಾರಾಟ ಕೊಡುಗೆಯನ್ನು ರಷ್ಯಾ ನೀಡಿತ್ತು.
ಭಾರತದ ಇನ್ನೂ ಹಲವು ಕಂಪೆನಿಗಳು ತೈಲ ಖರೀದಿಸಲು ಮುಂದಾ ಗಿವೆ. ಮಾರ್ಚ್ ಮೊದಲಾ ರ್ಧದಲ್ಲಿ ಭಾರತವು ರಷ್ಯಾದಿಂದ ದಿನಕ್ಕೆ 3.60 ಲಕ್ಷ ಬ್ಯಾರೆಲ್ ತೈಲ ಖರೀದಿಸಿದೆ. ಕಳೆದ ಮಾರ್ಚ್ಗೆ ಹೋಲಿಸಿದರೆ ಈ ಬಾರಿ 4 ಪಟ್ಟು ಅಧಿಕ ಕಚ್ಚಾ ತೈಲ ಆಮದು ಮಾಡಿಕೊಂಡಿದೆ.