Friday, 22nd November 2024

Ola Electric: ಓಲಾ ಕಂಪನಿಯ 500 ಕಾರ್ಮಿಕರ ವಜಾ ಸಾಧ್ಯತೆ; ಕಾರಣ ಏನು?

Ola Electric

ನವದೆಹಲಿ: ಆರ್ಥಿಕ ಸಂಕಷ್ಟದಲ್ಲಿರುವ ಓಲಾ ಎಲೆಕ್ಟ್ರಿಕ್ (Ola Electric) ಕಂಪನಿಯು 500 ಕಾರ್ಮಿಕರನ್ನು ವಜಾಗೊಳಿಸುವ ಸಾಧ್ಯತೆ ಇದೆ. 2024-25ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ನಷ್ಟ 495 ಕೋಟಿ ರೂ.ಗಳಾಗಿದ್ದು, ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ 524 ಕೋಟಿ ರೂ. ನಷ್ಟವಾಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ. 5.53ರಷ್ಟು ಇಳಿಕೆಯಾಗಿದೆ.

ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಆರ್ಥಿಕವಾಗಿ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿ ಲಾಭದಾಯಕವಾಗಿ ಮುನ್ನಡೆಯಲು ಪುನರ್ ರಚನೆಯ ಭಾಗವಾಗಿ ವಿವಿಧ ವಿಭಾಗದ 500ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ.

2024- 25ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಓಲಾ ಎಲೆಕ್ಟ್ರಿಕ್‌ನ ಆದಾಯವು 873 ಕೋಟಿ ರೂ. ನಿಂದ 1,214 ಕೋಟಿ ರೂ. ಗೆ ಅಂದರೆ ಸರಿಸುಮಾರು ಶೇ. 39.06ರಷ್ಟು ಏರಿಕೆಯಾಗಿದೆ. ಓಲಾ ಮಾರಾಟ ಇದೇ ಅವಧಿಯಲ್ಲಿ 56,813 ಯುನಿಟ್‌ಗಳಿಂದ 98,619 ಯುನಿಟ್‌ಗಳಿಗೆ ಅಂದರೆ ಸರಿಸುಮಾರು ಶೇ. 73.6ರಷ್ಟು ಏರಿಕೆಯಾಗಿದೆ.

Ola Electric

ಭವಿಶ್ ಅಗರ್ವಾಲ್ ನೇತೃತ್ವದ ಕಂಪನಿಯು 2022ರಲ್ಲಿ ಸ್ಥಾಪನೆಯಾದ ಬಳಿಕ ಮೊದಲ ಬಾರಿಗೆ 2022ರ ಜುಲೈ ತಿಂಗಳಲ್ಲಿ 1,000 ಉದ್ಯೋಗಿಗಳನ್ನು ವಜಾಗೊಳಿಸಲಾಯಿತು. ಉಪಯೋಗಿಸಿದ ಕಾರುಗಳು, ಕ್ಲೌಡ್ ಕಿಚನ್ ಮತ್ತು ದಿನಸಿ ವಿತರಣೆ ಸೇರಿದಂತೆ ಮೂರು ವ್ಯವಹಾರಗಳನ್ನು ಮುಚ್ಚಲಾಯಿತು.

Business Idea: ಕತ್ತೆ ಹಾಲು ಮಾರಿದರೆ ಲಕ್ಷಾಂತರ ರೂ. ಆದಾಯ ಗಳಿಸಬಹುದು!

ಬಳಿಕ ಇವಿ ವ್ಯಾಪಾರದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿತ್ತು. ಬಳಿಕ ಇವಿ ವಿಭಾಗಕ್ಕೆ ಸುಮಾರು 800 ಉದ್ಯೋಗಿಗಳನ್ನು ನೇಮಿಸಿಕೊಂಡಿತ್ತು. 2022ರ ಸೆಪ್ಟೆಂಬರ್‌ನಲ್ಲಿ ಇದು ಸ್ಥಾಪನೆಯಾದ ಏಳು ತಿಂಗಳ ಬಳಿಕ ರೈಡ್ ಹೇಲಿಂಗ್ ವಿಭಾಗದ ಓಲಾ ಕ್ಯಾಬ್ಸ್‌ನ ಸಿಇಒ ಹೇಮಂತ್ ಬಕ್ಷಿ ಅವರು ರಾಜೀನಾಮೆ ನೀಡಿದ್ದರು. ಇದೀಗ ಕಂಪೆನಿ ಶೇ. ೧೦ರಷ್ಟು ಸಿಬ್ಬಂದಿಯನ್ನು ವಜಾಗೊಳಿಸಲು ಯೋಜನೆ ರೂಪಿಸುತ್ತಿದೆ.