Wednesday, 9th October 2024

ಆಸ್ತಿ ವಿವಾದ: ಮನೆಗೆ ಹಾಕಿದ ಬೆಂಕಿಗೆ ಕುಟುಂಬಸ್ಥರೇ ಸಜೀವ ದಹನ

ಇಡುಕ್ಕಿ: ವಯೋವೃದ್ಧ, ತನ್ನ ಮಗನ ಮನೆಯ ಬಾಗಿಲು ಹೊರಗಿನಿಂದ ಲಾಕ್ ಮಾಡಿ, ಮನೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಬಾಗಿಲು ಲಾಕ್ ಮಾಡಿದ್ದರಿಂದ ವೃದ್ಧನ ಮಗ, ಸೊಸೆ, ಇಬ್ಬರು ಮೊಮ್ಮಕ್ಕಳು ಸಜೀವ ದಹನವಾಗಿದ್ದಾರೆ.

ಕೇರಳದ ಇಡುಕ್ಕಿ ಜಿಲ್ಲೆಯ ತೊಡುಪುಳ ಸಮೀಪದ ಚೆನಿಕುಝಿ ಎಂಬಲ್ಲಿ ಘಟನೆ ನಡೆದಿದೆ.

ಚೀನಿಕ್ಕುಜಿಯ ಅಲಿಯಕ್ಕುನ್ನೆಲ್‌ನ ಹಮೀದ್ (79) ಆರೋಪಿ. ಈತನನ್ನು ಸೆರೆ ಹಿಡಿದಿರುವ ನೆರೆಹೊರೆಯವರು, ಶನಿವಾರ ತೊಡುಪುಳ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಮ್ಮದ್ ಫೈಝಲ್ (49), ಅವರ ಪತ್ನಿ ಶೀಬಾ (39), ಪುತ್ರಿಯರಾದ ಮೆಹರು (16) ಮತ್ತು ಅಸ್ನಾ (13) ಮನೆಯೊಳಗೆ ಸಜೀವ ದಹನವಾಗಿದ್ದಾರೆ.

ಕುಟುಂಬದ ಆಸ್ತಿ ಹಂಚಿಕೊಳ್ಳುವ ವಿವಾದ ಕೊಲೆಗೆ ಕಾರಣವಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೆರೆಹೊರೆಯವರ ಪ್ರಕಾರ, ಹಮೀದ್ ಮನೆಯಲ್ಲಿ ಪೆಟ್ರೋಲ್ ಸಂಗ್ರಹಿಸಿದ್ದ. ರಾತ್ರಿ ಮಗನ ಮನೆ ಬಳಿ ಬಂದ ಹಮೀದ್, ಮನೆಯವರು ಮಲಗಿದ್ದನ್ನು ಖಚಿತಪಡಿಸಿಕೊಂಡು, ಮಗ ಫೈಝಲ್ ಮಲಗುವ ಕೋಣೆಗೆ ಕಿಟಕಿ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದ ಬೆಂಕಿ ಹೊತ್ತಿ ಉರಿದಿದೆ. ಹಮೀದ್ ಮನೆಯ ಹೊರಗಡೆ ಲಾಕ್ ಮಾಡಿದ್ದರಿಂದ ಹೊರ ಬರಲಾಗದೆ, ನಾಲ್ವರು ಕಣ್ಣ ಮುಂದೆಯೇ ಸಜೀವ ದಹನವಾಗಿದ್ದಾರೆ.

ಆರೋಪಿ ಹಮೀದ್ ಮನೆಗೆ ಬೆಂಕಿ ಹಚ್ಚುವ ಮುನ್ನ ಟ್ಯಾಂಕ್ ನಿಂದ ಎಲ್ಲಾ ನೀರು ಖಾಲಿ ಮಾಡಿದ್ದ ಎಂದು ತಿಳಿದು ಬಂದಿದೆ.