ಸಂಸತ್‍ನ ಬಜೆಟ್ ಅಪೊವೇಶನ ಜನವರಿ 31ರಂದು ಪ್ರಾರಂಭವಾಗಿ ಫೆಬ್ರವರಿ 13 ರವರೆಗೆ ನಡೆಯಲಿದೆ. ನಂತರ ಮಾರ್ಚ್ 13 ರಂದು ಮತ್ತೆ ಸಂಸತ್ ಸಮಾವೇಶಗೊಂಡು ಏಪ್ರಿಲ್ 6 ರವರೆಗೆ ನಡೆಯುವ ವೇಳಾ ಪಟ್ಟಿ ನಿಗದಿಯಾಗಿದೆ.
ಬಜೆಟ್ ಅಪೊವೇಶನ ನೂತನವಾಗಿ ನಿರ್ಮಿಸಲಾಗಿರುವ ಸಂಸತ್‍ನ ಹೊಸ ಕಟ್ಟಡ ಸೆಂಟ್ರಲ್ ವಿಸ್ಟಾದಲ್ಲಿ ನಡೆಯಲಿದೆ ಎಂದು ನಿನ್ನೆ ಟ್ರೆಂಡ್ ಮಾಡಲಾಗಿತ್ತು. ಇದಕ್ಕೆ ಟ್ವೀಟ್ ಮೂಲಕ ಸ್ಪೀಕರ್ ಸ್ಪಷ್ಟನೆ ನೀಡಿದ್ದಾರೆ.
ಅಧ್ಯಕ್ಷರಾದ ದ್ರೌಪದಿಮುರ್ಮು ಅವರು ಪ್ರಸ್ತುತ ಸಂಸತ್ ಭವನದ ಕಟ್ಟಡದಲ್ಲಿಯೇ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಸೆಂಟ್ರಲ್ ವಿಸ್ಟಾದ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಸಂಸತ್‍ನ ಹೊಸ ಭವನ ನಿರ್ಮಿಸಲಾಗಿದೆ. 2020ರ ಡಿಸೆಂಬರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊಸ ಸಂಸತ್ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿದರು. ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸುತ್ತಿದೆ.