Saturday, 14th December 2024

ಸಂಸತ್‍ನ ಹಳೆಯ ಕಟ್ಟಡದಲ್ಲಿಯೇ ಸದನಗಳ ಜಂಟಿ ಸಮಾವೇಶ: ಓಂ ಬಿರ್ಲಾ

ವದೆಹಲಿ: ಸಂಸತ್‍ನ ಹಳೆಯ ಕಟ್ಟಡದಲ್ಲಿಯೇ ರಾಷ್ಟ್ರಪತಿ ದ್ರೌಪದಿ ಮುರ್ಮು ಉಭಯ ಸದನಗಳ ಜಂಟಿ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಸ್ಪಷ್ಟ ಪಡಿಸಿದ್ದಾರೆ.

ಈ ಮೂಲಕ ಬಜೆಟ್‍ನ ಅಧಿವೇಶನ ಹೊಸದಾಗಿ ನಿರ್ಮಿಸಲಾದ ಸಂಸತ್ ಭವನದಲ್ಲಿ ನಡೆಯಲಿದೆ ಎಂಬ ಊಹಾಪೊಹವನ್ನು ಸ್ಪೀಕರ್ ತಳ್ಳಿ ಹಾಕಲಿದ್ದಾರೆ.

ಸಂಸತ್‍ನ ಬಜೆಟ್ ಅಪೊವೇಶನ ಜನವರಿ 31ರಂದು ಪ್ರಾರಂಭವಾಗಿ ಫೆಬ್ರವರಿ 13 ರವರೆಗೆ ನಡೆಯಲಿದೆ. ನಂತರ ಮಾರ್ಚ್ 13 ರಂದು ಮತ್ತೆ ಸಂಸತ್ ಸಮಾವೇಶಗೊಂಡು ಏಪ್ರಿಲ್ 6 ರವರೆಗೆ ನಡೆಯುವ ವೇಳಾ ಪಟ್ಟಿ ನಿಗದಿಯಾಗಿದೆ.

ಬಜೆಟ್ ಅಪೊವೇಶನ ನೂತನವಾಗಿ ನಿರ್ಮಿಸಲಾಗಿರುವ ಸಂಸತ್‍ನ ಹೊಸ ಕಟ್ಟಡ ಸೆಂಟ್ರಲ್ ವಿಸ್ಟಾದಲ್ಲಿ ನಡೆಯಲಿದೆ ಎಂದು ನಿನ್ನೆ ಟ್ರೆಂಡ್ ಮಾಡಲಾಗಿತ್ತು. ಇದಕ್ಕೆ ಟ್ವೀಟ್ ಮೂಲಕ ಸ್ಪೀಕರ್ ಸ್ಪಷ್ಟನೆ ನೀಡಿದ್ದಾರೆ.

ಅಧ್ಯಕ್ಷರಾದ ದ್ರೌಪದಿಮುರ್ಮು ಅವರು ಪ್ರಸ್ತುತ ಸಂಸತ್ ಭವನದ ಕಟ್ಟಡದಲ್ಲಿಯೇ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಸೆಂಟ್ರಲ್ ವಿಸ್ಟಾದ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಸಂಸತ್‍ನ ಹೊಸ ಭವನ ನಿರ್ಮಿಸಲಾಗಿದೆ. 2020ರ ಡಿಸೆಂಬರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊಸ ಸಂಸತ್ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿದರು. ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸುತ್ತಿದೆ.