Friday, 22nd November 2024

Omar Abdullah : 2 ಗಂಟೆಯಲ್ಲಿ 21 ಕಿ.ಮೀ ಮ್ಯಾರಥಾನ್‌ ಓಡಿದ ಕಾಶ್ಮೀರ ಸಿಎಂ ಉಮರ್ ಅಬ್ದುಲ್ಲಾ!

Omar Abdullah

ಶ್ರೀನಗರ : ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ (Omar Abdullah) ಭಾನುವಾರ ಕಾಶ್ಮೀರ ಮ್ಯಾರಥಾನ್‌ನಲ್ಲಿ ತಾವೇ ಓಡುವ ಮೂಲಕ ಚಾಲನೆ ನೀಡಿದರು. ಈ ಸ್ಪರ್ಧೆಯಲ್ಲಿ 13 ದೇಶಗಳನ್ನು ಪ್ರತಿನಿಧಿಸುವ 2,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಇದು ಕಣಿವೆ ರಾಜ್ಯದಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಅಥ್ಲೆಟಿಕ್ ಸ್ಪರ್ಧೆ.

54 ವಯಸ್ಸಿನ ಉಮರ್ ಅಬ್ದುಲ್ಲಾ (Omar Abdullah) ಅವರು ಯಾವುದೇ ತರಬೇತಿ ಇಲ್ಲದೆ ಮ್ಯಾರಥಾನ್ ನಲ್ಲಿ ಭಾಗವಹಿಸಿ ಹಾಫ್ ಮ್ಯಾರಥಾನ್ (21 ಕಿಲೋಮೀಟರ್) ಕೇವಲ 2 ಗಂಟೆಗಳಲ್ಲಿ ಪೂರ್ಣಗೊಳಿಸಿದ್ದಾರೆ. ಇನ್ನು ಬಾಲಿವುಡ್ ನಟ ಸುನೀಲ್ ಶೆಟ್ಟಿ ಕೂಡ ಅಬ್ದುಲ್ಲಾ ಅವರೊಂದಿಗೆ ಚಾಲನೆ ಸಮಾರಂಭದಲ್ಲಿ ಭಾಗವಹಿಸಿದ್ದರು.

ಮ್ಯಾರಥಾನ್‌ ಓಟದ ಬಗ್ಗೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್‌ ಮಾಡಿದ್ದು “ನನ್ನ ಜೀವನದಲ್ಲೇ 13 ಕಿ.ಮೀ ಗೂ ಹೆಚ್ಚು ದೂರ ಓಡಿರಲಿಲ್ಲ. ಆದರೆ ಇಂದು ಇತರ ಓಟಗಾರರಿಂದ ಪ್ರೇರಿತನಾಗಿ ಹೆಜ್ಜೆಯನ್ನಿಟ್ಟಿದ್ದೆ.ಅದರಲ್ಲೂ ಸರಿಯಾದ ತರಬೇತಿ ಇಲ್ಲ, ಓಡುವ ಯೋಜನೆ ಇರಲಿಲ್ಲ. ದೇಹದಲ್ಲಿ ಶಕ್ತಿಯೂ ಇರಲಿಲ್ಲ. ಓಟದ ಮೊದಲು ಕೇವಲ ಒಂದು ಬಾಳೆಹಣ್ಣು ಮತ್ತು ಒಂದೆರಡು ಖರ್ಜೂರವನ್ನು ತಿಂದಿದ್ದೆ. ಅದರಲ್ಲೂ ನಾನು ನನ್ನ ಮನೆಯನ್ನು ದಾಟಿ ಓಡುತ್ತಿದ್ದ ವೇಳೆ ನನ್ನ ಕುಟುಂಬ ಹಾಗೂ ಇತರರು ನನ್ನನ್ನು ಹುರಿದುಂಬಿಸುತ್ತಿದ್ದುದು ನನ್ನ ಮರೆಯದ ಕ್ಷಣವಾಗಿತ್ತು” ಎಂದು ಟ್ವೀಟ್‌ ಮಾಡಿದ್ದಾರೆ.

ಮುಂದುವರಿದ ಅವರು ಮ್ಯಾರಥಾನ್‌ ಒಂದು ಅತ್ಯುತ್ತಮ ಅಥ್ಲೆಟಿಕ್‌ ಕೂಟ. ಅದರಲ್ಲೂ ಓಟಗಾರರಿಗೆ ಹುರಿದುಂಬಿಸುತ್ತ ಬಂದಿರುವ ಶ್ರೀನಗರದ ಜನತೆಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಕಾಶ್ಮೀರದ ಮ್ಯಾರಥಾನ್‌ ಭವಿಷ್ಯದದಲ್ಲಿ ಅಗ್ರ ಪಟ್ಟಿಯಲ್ಲಿ ಸೇರಲಿದೆ ಎಂದು ಹೇಳಿದರು.

ಮ್ಯಾರಥಾನ್‌ ಕಾರ್ಯಕ್ರಮದಲ್ಲಿ ಒಟು 13 ದೇಶಗಳಿಂದ 35 ಮಂದಿ ಸ್ಥಳೀಯ ಕ್ರೀಡಾಪಟುಗಳು ಹಾಗೂ 59 ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಭಾಗವಹಿಸಿದ್ದರು. ಅದರಲ್ಲಿ ಭಾರತದ ದೂರದ ಓಟಗಾರರು ಸೇರಿದಂತೆ ಏಷ್ಯನ್‌ ಚಿನ್ನ ಪದಕಧಾರಿಗಳು ಹಾಗೂ ಯೂರೋಪ್‌ ಮತ್ತು ಆಫ್ರಿಕಾದ ಇತರ ಉತ್ತಮ ಓಟಗಾರರು ಭಾಗವಹಿಸಿದ್ದರು.

ಇದನ್ನೂ ಓದಿ : Bomb Threat : ‘ತೋಳ ಬಂತು ಕತೆಯಾಯ್ತು’ ವಿಮಾನಗಳಿಗೆ ಬಾಂಬ್‌ ಬೆದರಿಕೆ! 32 ಪ್ರಕರಣಗಳಲ್ಲಿ ಒಂದು ವಿಮಾನವಷ್ಟೇ ತುರ್ತು ಭೂಸ್ಪರ್ಶ

ಪ್ರವಾಸೋದ್ಯಮ ವಿಭಾಗದ ನಿರ್ದೇಶಕ ರಾಜ ಯಾಕೂಬ್‌ ಮಾತನಾಡಿ, ಕಾಶ್ಮೀರ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಿಗೆ ಶಾಂತಿಯುತ ಪ್ರದೇಶ ಎಂಬುದನ್ನು ಈ ಮ್ಯಾರಥಾನ್‌ ಸಂದೇಶ ನೀಡಿದೆ ಎಂಬುದಾಗಿ ಹೇಳಿದರು.

ಭಾರತಿಯರು ಹಾಗೂ ಅಂತರಾಷ್ಟ್ರೀಯ ಸ್ಪರ್ಧಿಗಳು ಕಾಶ್ಮೀರದ ಆತಿಥ್ಯವನ್ನು ಕೊಂಡಾಡಿದ್ದಾರೆ. ಕ್ರೀಡಾಪಟು ದ್ಯಾನಿಶ್‌ ಅವರು ಮೊದಲ ಬಾರಿಗೆ ಸ್ಪರ್ಧಿಸಿದ್ದು, ಶ್ರೀನಗರದ ಸೌಂದರ್ಯ ಹಾಗೂ ಅಲ್ಲಿನ ಜನರನ್ನು ಹೊಗಳಿದ್ದಾರೆ. ಅಷ್ಟೇ ಅಲ್ಲ ಭಾರತದ 45 ಕ್ರೀಡಾಪಟುಗಳನ್ನು ಪ್ರತಿನಿಧಿಸಿದ್ದ ಸುನಿತಾ ಅವರು ಅತ್ಯುತ್ತಮ ಕಾರ್ಯಕ್ರಮದ ಜತೆಗೆ ಪ್ರವಾಸಿ ಸ್ಥಳ ಗುಲ್ಮಾರ್ಗ್‌ಗೆ ಪ್ರವಾಸ ಕೈಗೊಂಡಿದ್ದಾರೆ. ಈ ಯೋಜನೆ ಇನ್ನು ಮ್ಯಾರಥಾನ್‌ನ ಮೆರಗನ್ನು ಹೆಚ್ಚಿಸಿತ್ತು.