Friday, 22nd November 2024

Omar Abdullah : ಉಮರ್ ಅಬ್ದುಲ್ಲಾ ಸರ್ಕಾರದಲ್ಲಿ ಸುರೇಂದರ್ ಚೌಧರಿ ಡಿಸಿಎಂ ಆಗಿದ್ದು ಯಾಕೆ? ಅದಕ್ಕೊಂದು ಕಾರಣವಿದೆ

Omar Abdullah

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ (Omar Abdullah) ಬುಧವಾರ ಜಮ್ಮುವಿನ ನೌಶೇರಾದಿಂದ ಪಕ್ಷದ ಮುಖಂಡ ಸುರೇಂದರ್ ಚೌಧರಿ ಅವರನ್ನು ತಮ್ಮ ಉಪ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಅವರ ಆಯ್ಕೆ ಬಗ್ಗೆ ಸಿಎಂ ಉಮರ್ ವಿಶೇಷೆ ಎಂದು ಉಲ್ಲೇಖಿಸಿದ್ದು, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವುದು ನಮ್ಮ ಪ್ರಯತ್ನ ” ಎಂದು ಹೇಳಿದ್ದಾರೆ. ಉಮರ್ ಸಂಪುಟದಲ್ಲಿ ಸುರೇಂದರ್ ಅವರಲ್ಲದೆ ಸಕೀನಾ ಮಸೂದ್ (ಇಟೂ), ಜಾವೇದ್ ದಾರ್, ಜಾವೇದ್ ರಾಣಾ, ಸತೀಶ್ ಶರ್ಮಾ ಕೂಡ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಮೂರು ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಕ್ರಮೇಣ ಭರ್ತಿ ಮಾಡಲಾಗುವುದು ಎಂದು ಹೇಳಿದ್ದಾರೆ.

ಚೌಧರಿ ಡಿಸಿಎಂ ಯಾಕೆ?

ನೌಶೇರಾ ಕ್ಷೇತ್ರದಿಂದ ಬಿಜೆಪಿಯ ಜಮ್ಮು ಮತ್ತು ಕಾಶ್ಮೀರ ಅಧ್ಯಕ್ಷ ರವೀಂದರ್ ರೈನಾ ಅವರನ್ನು 7,819 ಮತಗಳಿಂದ ಸೋಲಿಸುವ ಮೂಲಕ ದೈತ್ಯ ಸಂಹಾರಿಯಾಗಿ ಚೌಧರಿ ಹೊರಹೊಮ್ಮಿದ್ದರು. ಹಿಂದೆ ಪಿಡಿಪಿ ಮತ್ತು ಬಿಜೆಪಿಯ ಮಾಜಿ ಸದಸ್ಯರೂ ಆಗಿದ್ದಅವರನ್ನು ಉಮರ್‌ ತಮ್ಮ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ.

ಚೌಧರಿ 2022 ರಲ್ಲಿ ಪಿಡಿಪಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರು. ಕಳೆದ ವರ್ಷ ಜುಲೈನಲ್ಲಿಎನ್‌ಸಿಗೆ ಸೇರಿ ಬಿಜೆಪಿ ಸೇರಿ ಒಂದು ವರ್ಷದ ಬಿಜೆಪಿ ಜತೆಗಿನ ಸಂಬಂಧ ಕೊನೆಗೊಳಿಸಿದ್ದರು. ಸುರೇಂದರ್ ಅವರು ಜಮ್ಮುವಿನ ಪ್ರತಿನಿಧಿಯಾಗಿದ್ದಾರೆ. ಹೀಗಾಗಿ ಅವರನ್ನು ಅಲ್ಲಿನ ಪ್ರತಿನಿಧಿಯಾಗಿ ಅಯ್ಕೆ ಮಾಡಲಾಗಿದೆ.

ಈ ಸರ್ಕಾರದಲ್ಲಿ ಜಮ್ಮುವಿಗೆ ಪ್ರತಿನಿಧಿಗಳಿಲ್ಲ ಎಂದು ಭಾವಿಸಲು ನಾವು ಅವಕಾಶ ನೀಡುವುದಿಲ್ಲ ಎಂದು ನಾನು ಹೇಳಿದ್ದೆ. ನಾನು ಜಮ್ಮುವಿನಿಂದ ಉಪಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದೇನೆ, ಇದರಿಂದಾಗಿ ಜಮ್ಮುವಿನ ಜನರು ಈ ಸರ್ಕಾರವು ಉಳಿದವರಂತೆ ತಮ್ಮದು ಎಂದು ಭಾವಿಸುತ್ತಾರೆ” ಎಂದು ಉಮತ್‌ ಹೇಳಿದ್ದಾರೆ.

ಇದನ್ನೂ ಓದಿ: Jammu and Kashmir : ಜಮ್ಮು ಮತ್ತು ಕಾಶ್ಮೀರದ ಕಪ್ವಾರಾದಲ್ಲಿ ಇಬ್ಬರು ಉಗ್ರರು ಎನ್ಕೌಂಟರ್‌ನಲ್ಲಿ ಹತ್ಯೆ

2014ರ ಅದೇ ವಿಧಾನಸಭಾ ಚುನಾವಣೆಯಲ್ಲಿ ಪಿಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚೌಧರಿ 10,000 ಮತಗಳ ಅಂತರದಿಂದ ರೈನಾ ವಿರುದ್ಧ ಸೋತಿದ್ದರು. 2019ರಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಮತ್ತು ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಇದು ಮೊದಲ ಚುನಾಯಿತ ಸರ್ಕಾರವಾಗಿದೆ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ, ನ್ಯಾಷನಲ್ ಕಾನ್ಫರೆನ್ಸ್ 90 ಸ್ಥಾನಗಳಲ್ಲಿ 42 ಸ್ಥಾನಗಳನ್ನು ಗೆದ್ದರೆ, ಮೈತ್ರಿ ಪಾಲುದಾರ ಕಾಂಗ್ರೆಸ್ ಆರು ಸ್ಥಾನಗಳನ್ನು ಗೆದ್ದಿದೆ. ಒಟ್ಟಾಗಿ, ಎರಡು ಚುನಾವಣಾ ಪೂರ್ವ ಮಿತ್ರಪಕ್ಷಗಳು 95 ಸದಸ್ಯರ ವಿಧಾನಸಭೆಯಲ್ಲಿ ಬಹುಮತ ಹೊಂದಿವೆ. ಐದು ಸದಸ್ಯರನ್ನು ಲೆಫ್ಟಿನೆಂಟ್ ಗವರ್ನರ್ ನಾಮನಿರ್ದೇಶನ ಮಾಡಲಿದ್ದಾರೆ.