ಈ ಮೂಲಕ ಭಾರತದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 34 ಕ್ಕೆ ಏರಿಕೆ ಯಾಗಿದೆ.
ದೇಶದಲ್ಲಿ ಇದುವರೆಗೆ 34 ಮಂದಿಯಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದ್ದು, ಮಹಾರಾಷ್ಟ್ರದಲ್ಲಿ 17 ಮಂದಿಗೆ, ರಾಜಸ್ತಾನ ದಲ್ಲಿ 9, ಕರ್ನಾಟಕದಲ್ಲಿ 2 ಮತ್ತು ಗುಜರಾತ್ ನಲ್ಲಿ ಮೂವರು ಮತ್ತು ದೆಹಲಿಯಲ್ಲಿ 2, ಆಂಧ್ರಪ್ರದೇಶದಲ್ಲಿ ಒಬ್ಬರಿಗೆ ಒಮ್ರಿಕಾನ್ ರೂಪಾಂತರ ಸೋಂಕು ಕಾಣಿಸಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.