Wednesday, 11th December 2024

Viral Video: ರ್‍ಯಾಶ್ ಡ್ರೈವಿಂಗ್ ಮಾಡಿ ಬೈಕ್‌ಗೆ ಡಿಕ್ಕಿ ಹೊಡೆದು ʻಬಿದ್ದರೆ ಬೀಳಲಿ, ನೋ ಪ್ರಾಬ್ಲಂʼ ಎಂದ ಕಾರು ಚಾಲಕ

Viral Video

ಚಂಡೀಗಡ: ಕೆಲವರು ಕೈಗೆ ಬೈಕ್‌, ಕಾರು ಸಿಕ್ಕರೆ ಸಾಕು ರಸ್ತೆಯಲ್ಲಿ ಬಿಟ್ಟು ಆಕಾಶದಲ್ಲೇ ಹಾರುವಂತೆ ವರ್ತಿಸುತ್ತಾರೆ. ರಸ್ತೆಯಲ್ಲಿ ಹೋಗುವವರು ಅವರ ಲೆಕ್ಕಕ್ಕೂ ಸಿಗಲ್ಲ, ಕಣ್ಣಿಗೂ ಬೀಳಲ್ಲ. ಮನಸ್ಸೋಇಚ್ಛೆ ವಾಹನ ಚಲಾಯಿಸಿ ದುರಂತಗಳಿಗೆ ಎಡೆಮಾಡಿಕೊಡುತ್ತಾರೆ. ಇವರ ಹುಚ್ಚಾಟಕ್ಕೆ ರಸ್ತೆಯಲ್ಲಿ ಹೋಗುವ ಇತರ ವಾಹನ ಸವಾರರು ಜೀವವನ್ನೇ ಪಣಕ್ಕೀಡುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಅಂತಹದ್ದೇ ಒಂದು ಘಟನೆ ಇದೀಗ ಹರ್ಯಾಣದಲ್ಲಿ ನಡೆದಿದೆ. ಬೈಕ್‌ಗೆ ಡಿಕ್ಕಿ ಹೊಡೆದ ಕಾರು ಚಾಲಕನ ಹುಚ್ಚಾಟ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಭಾರೀ ವೈರಲ್‌(Viral Video) ಆಗುತ್ತಿದೆ.

ನಗರದ ಬ್ಯುಸಿ ರಸ್ತೆಯಲ್ಲಿ ಸೋಶಿಯಲ್‌ ಮೀಡಿಯಾ ಇನ್‌ಫ್ಲೂವೆನ್ಸರ್‌(Social Media influencer) ಪ್ರತಿ ಗಂಟೆಗೆ 143 ಕಿ.ಮೀ ವೇಗದಲ್ಲಿ ಕಾರು ಓಡಿಸುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಕಾರು ಚಾಲಕನನ್ನು ರಜತ್‌ ದಲಾಲ್‌ ಎಂದು ಗುರುತಿಸಲಾಗಿದ್ದು, ಈತ ವೇಗವಾಗಿ ಕಾರು ಚಾಲಾಯಿಸುತ್ತಾ ಒಂದರ ಹಿಂದೆ ಒಂದರಂತೆ ವಾಹನಗಳನ್ನು ಓವರ್‌ ಟೇಕ್‌ ಮಾಡುತ್ತಾ ಮುಂದೆ ಸಾಗಿದ್ದಾನೆ. ಹೀಗೆ ಮುಂದೆ ಸಾಗುತ್ತಾ ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಜೊತೆಗಿದ್ದ ಮಹಿಳೆಯೊಬ್ಬಳು ಸರ್‌ ಆತ ಕೆಳಗೆ ಬಿದ್ದ ಎನ್ನುತ್ತಾಳೆ. ಆಗ ರಜತ್‌ ದಲಾಲ್‌, ಬಿದ್ದರೆ ಬೀಳಲಿ ಬಿಡು.. ನೋ ಪ್ರಾಬ್ಲಂ ಎಂದಿದ್ದಾನೆ. ಹಾಗೆ ಮಾಡಬೇಡಿ ಎಂದು ಆಕೆ ಹೇಳಿದಾಗ ಇದು ನಿತ್ಯದ ಕೆಲಸ ಎಂದಿದ್ದಾನೆ. ಇದನ್ನು ಕಾರಿನ ಹಿಂದೆ ಕುಳಿತಿದ್ದ ವ್ಯಕ್ತಿ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದಾನೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿhttps://x.com/DeepikaBhardwaj/status/1829237862828568632

ಇದೀಗ ಈ ವಿಡಿಯೋ ̧ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದು, ಚಾಲಕನ ಉದ್ಧಟತನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಫರಿದಾಬಾದ್‌ ರಸ್ತೆಯಲ್ಲಿ ಸಂಭವಿಸಿದ ಘಟನೆಯಾಗಿದ್ದು, ಚಾಲಕನ ಲೈಸೆನ್ಸ್‌ ರದ್ದುಗೊಳಿಸಿ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ. ವಿಡಿಯೋ ವೈರಲ್‌ ಆಗಿದ್ದರೂ ಏಕೆ ಚಾಲಕನನ್ನು ಇನ್ನೂ ಅರೆಸ್ಟ್‌ ಮಾಡಿಲ್ಲ ಎಂದು ಮತ್ತೊರ್ವ ಪ್ರಶ್ನೆ ಮಾಡಿದ್ದಾನೆ. ಟ್ರಾಫಿಕ್‌ ಪೊಲೀಸರ ಕಣ್ಣಿಗೆ ಇಂತವರು ಬೀಳುವುದಿಲ್ಲವೇ ಎಂದು ಮತ್ತೊರ್ವ ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ವರದಿಯ ಪ್ರಕಾರ, ಫರಿದಾಬಾದ್ ಪೊಲೀಸರು ರಜತ್ ದಲಾಲ್‌ಗೆ ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ಚಲನ್ ನೀಡುತ್ತಿದ್ದಾರೆ. ಎನ್‌ಎಚ್‌ಪಿಸಿ ಮೆಟ್ರೋ ನಿಲ್ದಾಣದ ಬಳಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ.

https://youtube.com/shorts/CuhUF3KlkaQ?si=25Q7s767HoPJcAIQ