Sunday, 15th December 2024

ಜಾರ್ಖಂಡ್‌ನ ಲತೇಹರ್‌ನಲ್ಲಿರುವ ಸೇತುವೆಗೆ ಓಣಂ ಸೇತುವೆ ಅಂತಾರೆ..!

ಪಲಮು: ಜಾರ್ಖಂಡ್‌ನ ಸೇತುವೆಯೊಂದು ಕೇರಳದೊಂದಿಗೆ ಸಂಬಂಧ ಹೊಂದಿದೆ. ಈ ಸೇತುವೆಯು ಜಾರ್ಖಂಡ್‌ನ ರಾಜಧಾನಿ ರಾಂಚಿಯಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಲತೇಹಾರ್‌ನ ಬರೇಸಾದ್ ಪ್ರದೇಶದಲ್ಲಿದೆ. ಈ ಸೇತುವೆಗೆ ಓಣಂ ಸೇತುವೆ ಎಂದು ಹೆಸರಿಡಲಾಗಿದೆ.

ಲತೇಹರ್​​​ನಲ್ಲಿರುವ ಓಣಂ ಸೇತುವೆ ಹಲವು ವಿಧಗಳಲ್ಲಿ ವಿಶೇಷವಾಗಿದೆ. ಇದರ ನಿರ್ಮಾಣವನ್ನು ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿಯಾಗಿ ಸಿದ್ಧಪಡಿಸಿವೆ. ಸೆಪ್ಟೆಂಬರ್ 2022 ರಲ್ಲಿ ಬುಧಾ ಪಹಾಡ್‌ನಲ್ಲಿ ಮಾವೋವಾದಿಗಳ ವಿರುದ್ಧ ಆಪರೇಷನ್ ಆಕ್ಟೋಪಸ್ ಪ್ರಾರಂಭಿಸಲಾಯಿತು. ಈ ಕಾರ್ಯಾಚರಣೆಯ ಸಮಯದಲ್ಲಿ ಸೈನಿಕರು ಬುಧಾ ನದಿಯನ್ನು ದಾಟಬೇಕಾಗಿತ್ತು. ಭದ್ರತಾ ಪಡೆಗಳು ಆರಂಭದಲ್ಲಿ ಕಚ್ಚಾ ಸೇತುವೆ ನಿರ್ಮಿಸುವ ಯೋಜನೆಯನ್ನು ಸಿದ್ಧಪಡಿಸಿದ್ದವು.

ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾದ ದಿನದಿಂದಲೇ ಓಣಂ ಕೂಡ ಆರಂಭವಾಗಿತ್ತು. ಓಣಂನ ಸಂತಸ ಮತ್ತು ಉತ್ಸಾಹ ದಲ್ಲಿ ಪಾಲ್ಗೊಳ್ಳುವ ಜೊತೆಗೆ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಓಣಂನ ಕೊನೆಯ ದಿನದಂದು ಇದರ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಹೀಗಾಗಿ ಈ ಸೇತುವೆಗೆ ಓಣಂ ಎಂದು ಹೆಸರಿಸಲಾಯಿತು.

ಇದೀಗ ಓಣಂ ಸೇತುವೆ 15 ಕಿಲೋಮೀಟರ್ ವ್ಯಾಪ್ತಿಯಲ್ಲಿನ ಗ್ರಾಮಸ್ಥರಿಗೆ ಜೀವನಾಡಿಯಾಗಿ ಮಾರ್ಪಟ್ಟಿದೆ. ಈ ಸೇತುವೆಯು ಲತೇಹಾರ್‌ನ ಬರಸಾದ್ ಮತ್ತು ಬುಧಾ ಪಹಾಡ್‌ನ ಟಿಸಿಯಾ ನಡುವೆ ಇದೆ. ಓಣಂ ಸೇತುವೆ ತಿಸಿಯಾ, ನವಟೋಳಿ ಮುಂತಾದ ಸುಮಾರು ಅರ್ಧ ಡಜನ್ ಹಳ್ಳಿಗಳ ಜೀವನಾಡಿಯಾಗಿದೆ.