ಮಾಹಿತಿ ತಂತ್ರಜ್ಞಾನದ ತಯಾರಕರ ಸಂಘ (MAIT), ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆಯಂಡ್ ಇಂಡಸ್ಟ್ರಿ (FICCI), ಭಾರತೀಯ ಕೈಗಾರಿಕೆಗಳ ಒಕ್ಕೂಟ (CII), IIT ಕಾನ್ಪುರ ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳು, ಐಐಟಿ (BHU), ವಾರ ಣಾಸಿ ಮತ್ತು ಪರಿಸರ ಸಚಿವಾಲಯ ಸೇರಿದಂತೆ ಕೇಂದ್ರ ಸರ್ಕಾರದ ಸಚಿವಾಲಯಗಳು ಸೇರಿ ಈ ಒಂದು ನಿರ್ಧಾರಕ್ಕೆ ಬಂದಿವೆ.
ಎಲೆಕ್ಟ್ರಾನಿಕ್ ಸಾಧನಗಳಿಗೆ ಚಾರ್ಜಿಂಗ್ ಪೋರ್ಟ್ ಆಗಿ ಯುಎಸ್‌ಬಿ ಟೈಪ್ – ಸಿ ಅನ್ನು ಅಳವಡಿಸಿಕೊಳ್ಳುವ ಕುರಿತು ಅಕಾಡೆಮಿ ಗಳು, ಉದ್ಯಮದ ಸದಸ್ಯರು ಮತ್ತು ವಿವಿಧ ಸರ್ಕಾರಿ ಏಜೆನ್ಸಿಗಳ ನಡುವೆ ವಿಶಾಲವಾದ ಒಮ್ಮತ ಮೂಡಿ ಬಂದಿದೆ.
ಹೆಚ್ಚುವರಿಯಾಗಿ, ಟಾಸ್ಕ್‌ಫೋರ್ಸ್‌ನ ಸದಸ್ಯರು ಧರಿಸಬಹುದಾದ ವಸ್ತುಗಳಿಗೆ ಏಕರೂಪದ ಚಾರ್ಜಿಂಗ್ ಪೋರ್ಟ್‌ನ ಕಾರ್ಯ ಸಾಧ್ಯತೆ ಪರೀಕ್ಷಿಸಲು ಉದ್ಯಮ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಉಪ-ಗುಂಪನ್ನು ರಚಿಸಲು ನಿರ್ಧರಿಸಲಾಗಿದೆ.