Friday, 22nd November 2024

ರಂಜಾನ್: ಒಂದು ಗಂಟೆ ಮುನ್ನ ಕಚೇರಿಯಿಂದ ಬಿಡುವು

ಹೈದರಾಬಾದ್: ಎಲ್ಲಾ ಮುಸ್ಲಿಂ ಸರ್ಕಾರಿ ನೌಕರರು ರಂಜಾನ್ ತಿಂಗಳಲ್ಲಿ ಸಂಜೆ ಒಂದು ಗಂಟೆ ಮೊದಲೇ ಕಚೇರಿಗಳನ್ನು ಬಿಡಲು ಆಂಧ್ರ ಪ್ರದೇಶ ಸರ್ಕಾರ ಅನುಮತಿ ನೀಡಿದೆ.

ಇಸ್ಲಾಂ ಧರ್ಮ ಪ್ರತಿಪಾದಿಸುವ ಎಲ್ಲಾ ಸರ್ಕಾರಿ ನೌಕರರು, ಶಿಕ್ಷಕರು, ಗುತ್ತಿಗೆ ನೌಕರರು ಸಂಜೆ ಒಂದು ಗಂಟೆಯೊಳಗೆ ಕಚೇರಿಗಳು / ಶಾಲೆಗಳನ್ನು ಬಿಡಲು ಅನುಮತಿಸಲಾಗಿದೆ. ಏ.3 ರಿಂದ ಮೇ 2 ರವರೆಗೆ ರಂಜಾನ್ ತಿಂಗಳ ಎಲ್ಲಾ ಕೆಲಸದ ದಿನಗಳಲ್ಲಿ ಇದು ಅನ್ವಯ ಆಗಲಿದ.

ಶನಿವಾರ ಚಂದ್ರನ ದರ್ಶನವಾದ ನಂತರ ಮುಸ್ಲಿಮರು ಏ.3 ರಂದು ಉಪವಾಸ ಪ್ರಾರಂಭಿಸಿದರು. ಪ್ರತಿ ವರ್ಷ, ರಂಜಾನ್ ಚಂದ್ರನ ವೀಕ್ಷಣೆಯು ಮುಸ್ಲಿಮರಿಗೆ ಹೆಚ್ಚಿನ ಉಲ್ಲಾಸ ತರುತ್ತದೆ, ಅವರು ಉಪವಾಸ ಕ್ಕಾಗಿ ಸಿದ್ಧತೆಗಳನ್ನು ಮಾಡಲು ಮತ್ತು ವಿಶೇಷ ‘ತರಾವೀಹ್’ ಪ್ರಾರ್ಥನೆಗಳನ್ನು ಪ್ರಾರಂಭಿ ಸಲು ಮಸೀದಿಗಳಿಗೆ ಹೋಗುತ್ತಾರೆ.