Saturday, 14th December 2024

DK Shivakumar: ಒಂದು ರಾಷ್ಟ್ರ, ಒಂದು ಚುನಾವಣೆ ಬಿಜೆಪಿ ರಾಜಕೀಯ ಲಾಭದ ನಿರ್ಧಾರ; ಶಿವಕುಮಾರ್ ಆರೋಪ

DK Shivakumar

ದೆಹಲಿ: ಒಂದು ರಾಷ್ಟ್ರ, ಒಂದು ಚುನಾವಣೆ (One Nation One Election) ಬಿಜೆಪಿಯವರ (BJP) ರಾಜಕೀಯ ನಿರ್ಧಾರ. ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಮತ್ತು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಗುರುವಾರ ಅವರು ಮಾತನಾಡಿದರು.

ಈ ಸುದ್ದಿಯನ್ನೂ ಓದಿ | KPSC AEE Recruitment: 42 ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ನೇಮಕಾತಿಯ ಮಾಹಿತಿ ಇಲ್ಲಿದೆ

ಈ ಹಿಂದೆಯೇ ಈ ಪ್ರಸ್ತಾವನೆ ಇತ್ತಾದರೂ, ಸ್ಥಳೀಯ ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ಸರ್ಕಾರವನ್ನೂ ಅವಧಿ ಮುಗಿಯುವವರೆಗೂ ಮುಂದುವರೆಸಿ ಎಂದು ಯಾರನ್ನೂ ಬಲವಂತ ಮಾಡಲು ಸಾಧ್ಯವಿಲ್ಲ. ಮುಂದೆ ಏನಾಗುತ್ತದೆ ಎಂದು ಕಾದು ನೋಡೋಣ ಎಂದರು.

ಈ ಸುದ್ದಿಯನ್ನೂ ಓದಿ | Supreme Court: ಟೆಲಿಕಾಂ ಕಂಪನಿಗಳಿಗೆ ಹಿನ್ನಡೆ; ಎಜಿಆರ್‌ ಮರು ಲೆಕ್ಕಾಚಾರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಕಾಂಗ್ರೆಸ್ ಪಕ್ಷವು ಈ ನಿರ್ಧಾರವನ್ನು ಒಪ್ಪುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಈ ಸಂದರ್ಭದಲ್ಲಿ ತಿಳಿಸಿದರು.