Sunday, 15th December 2024

ಅನಂತ್’ನಾಗ್: ಭದ್ರತಾ ಪಡೆಗಳಿಂದ ಓರ್ವ ಉಗ್ರನ ಬಂಧನ

ಅನಂತ್ನಾಗ್: ಜಮ್ಮು ಮತ್ತು ಕಾಶ್ಮೀರದ ಅನಂತ್’ನಾಗ್ ಜಿಲ್ಲೆಯ ಗುಂದ್ ಬಾಬಾ ಖಲೀಲ್ ಎಂಬಲ್ಲಿ ಭದ್ರತಾ ಪಡೆಗಳು ಓರ್ವ ಉಗ್ರನನ್ನು ಬಂಧಿಸಿದ್ದಾರೆ.

ಪುಲ್ವಾಮ ಜಿಲ್ಲೆಯ ನಿವಾಸಿ ಜಹೀರ್ ಅಬ್ಬಾರ್ ಲೋನ್ ಬಂಧಿತ ಉಗ್ರ. ಬಂಧಿತನನ್ನು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದವನಾಗಿದ್ದಾನೆಂದು ಹೇಳಲಾಗುತ್ತಿದೆ.

ಗುಂದ್ ಬಾಬಾ ಖಲೀಲ್ ಎಂಬ ಪ್ರದೇಶದಲ್ಲಿ ಅಡಗಿ ಕುಳಿತಿದ್ದ ಉಗ್ರ ಭದ್ರತಾ ಪಡೆಗಳ ಕಣ್ಣಿಗೆ ಬಿದ್ದಿದ್ದು, ಈ ವೇಳೆ ಸೇನಾಪಡೆ ಹಾಗೂ ಉಗ್ರನ ನಡುವೆ ಭಾರೀ ಗುಂಡಿನ ಕಾಳಗ ನಡೆದಿದೆ, ಬಳಿಕ ಉಗ್ರನ ಮೇಲೆ ಗುಂಡು ಹಾರಿಸಿದ ಭದ್ರತಾಪಡೆಗಳು ಗಾಯ ಗೊಂಡ ಉಗ್ರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದುಬಂದಿದೆ.