Saturday, 14th December 2024

ಆನ್ಲೈನ್ ಪಿ ಎಚ್ ಡಿ ಪದವಿಗೆ ಮಾನ್ಯತೆ ಇಲ್ಲ

ನವದೆಹಲಿ: ವಿದೇಶಿ ಶಿಕ್ಷಣ ಸಂಸ್ಥೆಗಳು ಮತ್ತು ವಿವಿಗಳ ಸಹಯೋಗದೊಂದಿಗೆ ಎಜು ಟೆಕ್ ಕಂಪನಿಗಳು ನೀಡುವ ಆನ್ಲೈನ್ ಪಿ ಎಚ್ ಡಿ ಪದವಿಗೆ ಮಾನ್ಯತೆ ಇಲ್ಲ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಪ್ರಕಟಿಸಿದೆ.

ಪಿ ಎಚ್ ಡಿ, ಎಂಫಿಲ್ ಪದವಿ ಪ್ರದಾನಕ್ಕೆ ಯುಜಿಸಿ ನಿಗದಿಪಡಿಸಿರುವ 2016ರ ನಿಯಮಾ ವಳಿಗಳು ಮತ್ತು ತಿದ್ದುಪಡಿಗಳನ್ನು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಅನುಸರಿಸುವುದು ಕಡ್ಡಾಯವಾಗಿದೆ ಎಂದು ಯುಜಿಸಿ ಮತ್ತು ಎಐಸಿಟಿಇ ಜಂಟಿ ಆದೇಶದಲ್ಲಿ ತಿಳಿಸಿದೆ.

ಹೊಸ ತಲೆಮಾರಿನ ಎಜುಟೆಕ್ ಕಂಪನಿಗಳ ಆನ್ಲೈನ್ ಪಿಎಚ್ ಡಿ ಕಾರ್ಯಕ್ರಮಗಳನ್ನು ಯುಜಿಸಿ ಗುರುತಿಸಿಲ್ಲ.

ಪಿ ಎಚ್ ಡಿ ಪದವಿ ಪಡೆಯುವ ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿ ಕರು ಪ್ರವೇಶ ಪಡೆಯುವ ಮೊದಲು ಯುಜಿಸಿ ನಿಯಮಾವಳಿ 2016ರ ಪ್ರಕಾರ ಪಿ ಎಚ್ ಡಿ ಕಾರ್ಯಕ್ರಮಗಳ ದೃಢೀಕರಣ ಪರಿಶೀಲಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.