Sunday, 15th December 2024

‘ಮೈ ಲಾರ್ಡ್’, ‘ಯುವರ್‌ ಆನರ್‌’ ಎಂದು ಸಂಬೋಧಿಸಬೇಡಿ, ‘ಸರ್‌’ ಸಾಕು: ಒರಿಸ್ಸಾ ಹೈಕೋರ್ಟ್

ಭುವನೇಶ್ವರ: ನ್ಯಾಯಾಧೀಶರನ್ನು ವೈಭವೀಕರಿಸಿ, ‘ಮೈ ಲಾರ್ಡ್’ ಅಥವಾ ‘ಯುವರ್‌ ಆನರ್‌’ ಎಂದೆಲ್ಲಾ ಸಂಬೋಧಿಸಿ ಕರೆಯುವುದನ್ನು ನಿಲ್ಲಿಸಲು ಒರಿಸ್ಸಾ ಹೈಕೋರ್ಟ್ ವಕೀಲರಿಗೆ ಸೂಚಿಸಿದೆ.

ಎಲ್ಲಾ ಕೌನ್ಸೆಲ್‌ಗಳು ಮತ್ತು ಪಾರ್ಟಿಗಳು ಈ ಪೀಠದ ನ್ಯಾಯಾಧೀಶರನ್ನು ‘ಮೈ ಲಾರ್ಡ್’, ‘ಯುವರ್‌ ಲಾರ್ಡ್‌ಶಿಪ್’, ‘ಯುವರ್‌ ಆನರ್‌’ ಅಥವಾ ‘ಘನವೆತ್ತ’ ಎಂದೆಲ್ಲಾ ಕರೆಯುವುದನ್ನು ನಿಲ್ಲಿಸಿ. ಕೋರ್ಟ್‌ನ ಡಿಕೋರಂನೊಂದಿಗೆ ಹೊಂದುವ ‘ಸರ್‌’ ಎನ್ನುವಂಥ ಸಂಬೋಧನೆಗಳು ಸಾಕು,” ಎಂದು ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರಾದ ಡಾ. ಎಸ್ ಮುರಳೀಧರ್‌ ಮತ್ತು ನ್ಯಾಯಾಧೀಶ ಆರ್‌.ಕೆ. ಪಟ್ನಾಯಕ್‌ ತಿಳಿಸಿದ್ದಾರೆ.

 

‘ಮೈ ಲಾರ್ಡ್’, ‘ಯುವರ್‌ ಲಾರ್ಡ್‌ಶಿಪ್’ ಅಥವಾ ‘ಯುವರ್‌ ಆನರ್‌’ ಎಂದೆಲ್ಲಾ ಕರೆಯುವುದು ಕಡ್ಡಾಯವೇನಲ್ಲ ಎಂದಿದ್ದ ಸುಪ್ರೀಂ ಕೋರ್ಟ್, ನ್ಯಾಯಾಧೀಶರನ್ನು ಗೌರವಾನ್ವಿತವಾಗಿ ಸಂಬೋಧಿಸಿದರೆ ಸಾಕು ಎಂದಿತ್ತು.

2014ರಲ್ಲಿ, “ಇದು ಕಡ್ಡಾಯವೆಂದು ನಾವು ನಿಮಗೆ ಯಾವಾಗ ಹೇಳಿದ್ದೆವು ? ನೀವು ನಮ್ಮನ್ನು ಗೌರವಾನ್ವಿತವಾಗಿ ಸಂಬೋಧಿಸಿದರೆ ಸಾಕು,” ಎಂದು ಎಚ್‌. ಎಲ್ ದತ್ತು ಮತ್ತು ಎಸ್‌.ಎ. ಬೊಬ್ಡೆ ಇದ್ದ ಪೀಠ ತಿಳಿಸಿತ್ತು.